ಪೆಟ್ರೋಲಿಗೆ ನೀರು ಸೇರಿಸುತ್ತಿದ್ದ ಬಂಕ್ ಬಂದ್

Water added to petrol
ಬಳ್ಳಾರಿ, ಸೆ. 15 : ಡೀಸೆಲ್‌ನಲ್ಲಿ ನೀರು ಸೇರಿಸಿ ವಾಹನಗಳಿಗೆ ಹಾಕುವ ಮೂಲಕ ವಾಹನಗಳ ಇಂಜಿನ್ ದುರವಸ್ತೆಗೆ ಕಾರಣವಾಗುತ್ತಿದ್ದ ನಗರದ ಅನಂತಪುರ ರಸ್ತೆಯ ಹೀರೋಹೋಂಡಾ ಶೋರೂಂ ಮುಂದಿನ ಶ್ರೀವಿಷ್ಣು ಎಂಟರ್‌ಪ್ರೈಸಸ್ ಪೆಟ್ರೋಲ್ ಬಂಕ್ ಅನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಬುಧವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಪೆಟ್ರೋಲ್‌ ಬಂಕ್‌ನಲ್ಲಿ ನೀರನ್ನು ಸೇರಿಸಿ ಪೆಟ್ರೋಲ್ ಮಾರಾಟ ಮಾಡುವ ವ್ಯವಹಾರ ಅನೇಕ ವರ್ಷಗಳಿಂದಲೇ ನಡೆಯುತ್ತಿದ್ದರೂ ಕೂಡ ಬಂಕ್‌ನ ಮಾಲೀಕರು ರಾಜಕೀಯವಾಗಿ - ಆರ್ಥಿಕವಾಗಿ ಬಲಾಢ್ಯರಾಗಿದ್ದ ಕಾರಣ ಯಾರೊಬ್ಬರೂ ದೂರು ದಾಖಲು ಮಾಡಿರಲಿಲ್ಲ.

ಆದರೆ, ಬುಧವಾರ ಸಂಜೆ ವಾರ್ತಾ ಇಲಾಖೆಯ ವಾಹನಕ್ಕೆ 75 ಲೀಟರ್ ಡೀಸೆಲ್ ಹಾಕಿಸಿದಾಗ ವಾಹನ ಒಂದು ಫರ್ಲಾಂಗ್ ದೂರವಷ್ಟೇ ಸಾಗಿ ಇಂಜಿನ್ ಸೀಜ್ ಆಗಿತ್ತು. ವಾರ್ತಾಧಿಕಾರಿ ಶ್ರೀನಿವಾಸ್ ಕೂಡಲೇ ಮೆಕ್ಯಾನಿಕ್‌ಗಳನ್ನು ಕರೆಯಿಸಿ ಇಂಜಿನ್ ತೋರಿಸಿದಾಗ, ಡೀಸಲ್‌ನಲ್ಲಿ ನೀರು ಸೇರಿಸಿ ಮಾರಾಟ ಮಾಡಿರುವ ದಂಧೆ ಬಯಲಿಗೆ ಬಂದಿದೆ.

ಶ್ರೀನಿವಾಸ್ ಕೂಡಲೇ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿ ಮಂಜುನಾಥ್ ಮತ್ತು ಬಸವರಾಜ ಅವರಿಗೆ ದೂರು ಸಲ್ಲಿಸಿದಾಗ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಡೀಸೆಲ್ ಅನ್ನು ಪರಿಶೀಲಿಸಿದಾಗ ಡೀಸಲ್‌ನಲ್ಲಿ ನೀರಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅಧಿಕಾರಿಗಳು ಶ್ರೀನಿವಾಸ್ ಅವರಿಂದ ಲಿಖಿತ ದೂರನ್ನು ಪಡೆದು, ಬಂಕ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+