ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರಾಣಿ ಎದುರಾಕಿ ಕೊಂಡ್ರೆ ಸಮಯದಲ್ಲಿ ಮಾನ ಹರಾಜು

By Mahesh
|
Google Oneindia Kannada News

Minister Murugesh Nirani
ಬೆಂಗಳೂರು, ಸೆ.14: ತನ್ನ ಸುಮಾರು 600 ಕೋಟಿ ರೂಪಾಯಿ ಮೌಲ್ಯದ ಹೌಸಿಂಗ್ ಯೋಜನೆಯನ್ನು ನಕಲಿ ದಾಖಲೆ ಸೃಷ್ಟಿಸಿ ರದ್ದುಗೊಳಿಸಲಾದ ಅವ್ಯವಹಾರವನ್ನು ಮಾಧ್ಯಮಗಳಿಗೆ ಬಹಿರಂಗಗೊಳಿಸಬಾರದು ಎಂದು ರಾಜ್ಯ ಕೈಗಾರಿಕೋದ್ಯಮ ಸಚಿವ ಮುರುಗೇಶ್ ನಿರಾಣಿ ತನಗೆ ಬೆದರಿಕೆಯೊಡ್ಡಿದ್ದಾರೆ ಎಂದು ಉದ್ಯಮಿ ಆಲಂ ಪಾಷಾ ಆರೋಪಿಸಿದ್ದಾರೆ.

ಸಚಿವ ನಿರಾಣಿ ಉಪಾಧ್ಯಕ್ಷರಾಗಿದ್ದ ಹಾಗೂ ಮಾಜಿ ಸೀಎಂ ಯಡಿಯೂರಪ್ಪ ಅಧ್ಯಕ್ಷತೆಯ ಉನ್ನತ ಮಟ್ಟದ ಕ್ಲಿಯರಿಂಗ್ ಸಮಿತಿ ನಕಲಿ ದಾಖಲೆ ಆಧಾರದಲ್ಲಿ ತನ್ನ ಪ್ರಾಜೆಕ್ಟ್ ರದ್ದುಗೊಳಿಸಿದೆ ಎಂದಿರುವ ಪಾಷಾ, ಈ ಬಗ್ಗೆ ಯಡ್ಡಿ ಮತ್ತು ನಿರಾಣಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಸ್ಪೆಸ್ ಇಂಟರ್‌ನ್ಯಾಶನಲ್ ಪ್ರೈ ಲಿ ಆಡಳಿತ ನಿರ್ದೇಶಕರಾಗಿರುವ ಪಾಷಾ, ಕೋಟ್ಯಂತರ ರೂಪಾಯಿ ಯೋಜನೆ ರದ್ದುಗೊಳಿಸಿ ಯಡ್ಡಿ ಮತ್ತು ನಿರಾಣಿ ತನಗೆ ಭಾರೀ ಮೋಸ ಮಾಡಿದ್ದಾರೆ. "ನನ್ನ ಪ್ರಾಜೆಕ್ಟಿಗೆ ಜುಲೈ ತಿಂಗಳಲ್ಲಿ ನಡೆದಿದ್ದ 2010 ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಅನುಮತಿ ಸಿಕ್ಕಿತ್ತು. ಆದರೆ, ಕಳೆದ ಜನವರಿ 24ರಂದು ನಕಲಿ ದಾಖಲೆಗಳನ್ನಿಟ್ಟುಕೊಂಡು ಸರ್ಕಾರ ಯೋಜನೆ ರದ್ದುಗೊಳಿಸಿದೆ"

ಮಾಧ್ಯಮಗಳಿಗೆ ಈ ವಿಷಯ ಎಕ್ಸ್‌ಪೋಸ್ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ನಿರಾಣಿ ಬೆದರಿಕೆ ಹಾಕಿದ್ದಾರೆ. ಜೂನ್ 24ರಂದು ನಡೆದಿದ್ದ ಸ್ಕ್ರೀನಿಂಗ್ ಸಭೆಯಲ್ಲಿ, ಈ ವಿಷಯ ಎಲ್ಲೂ ಬಹಿರಂಗಗೊಳಿಸಬಾರದು ಎಂದು ತಾಕೀತು ಮಾಡಿದ್ದರು ಎಂದು ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಅಲಂ ಪಾಷಾ ವಿವರಿಸಿದ್ದಾರೆ.

ಯಡಿಯೂರಪ್ಪ ಮತ್ತು ಸಚಿವ ನಿರಾಣಿ ಸೇರಿ ತನ್ನ ಪ್ರಾಜೆಕ್ಟ್ ರದ್ದುಗೊಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿದ್ದಲ್ಲದೆ ಈ ಕೆಲಸಕ್ಕಾಗಿ ಅವರು ಕೆಐಎಡಿಬಿ ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ. ಹಾಗಾಗಿ ಪ್ರಾಜೆಕ್ಟ್ ರದ್ದಾಗಿದೆ. ತಮ್ಮ ಆಪ್ತರಿಗೆ ಜಾಗ ನೀಡಲೆಂದೇ ಈ ಕೆಲಸ ಮಾಡಿದ್ದಾರೆ ಪಾಷಾ ಆರೋಪಿಸಿದ್ದಾರೆ.

"ಒಂದು ವೇಳೆ ತನ್ನ ವಿರುದ್ಧ ಆರೋಪ ಹೊರಿಸುತ್ತ ಬಂದರೆ ತನ್ನ ಮಾಲಕತ್ವದ ಅವಕಾಶಗಳಿವೆ. ನಿಮ್ಮ ರಾಶಿಯಲ್ಲಿ ಶನಿಯಿದ್ದರೂ ಅದರಿಂದ ನಿಮಗೆ 'ಸಮಯ' ಟೀವಿಯಲ್ಲಿ ನನ್ನ ಮಾನ ಹರಾಜು ಮಾಡಲಾಗುವುದು ಎಂದು ನಿರಾಣಿ ಬೆದರಿಕೆಯೊಡ್ಡಿದ್ದರು" ಎಂದು ಅಲಂ ಪಾಷಾ ಆರೋಪಿಸಿದ್ದಾರೆ.

ಜಿಎಂ 2010 ಎಫೆಕ್ಟ್: 2010ರ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಫಲವಾಗಿ 389 ಕಂಪೆನಿಗಳ ಜೊತೆ ಸುಮಾರು 87.5 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಬಂಡವಾಳ ಹರಿದು ಬಂದಿದೆ. 19 ಯೋಜನೆಗಳು ಈಗಾಗಲೇ ಕಾರ್ಯಗತವಾಗಿದ್ದು, 222 ಯೋಜನೆಗಳ ಅನುಷ್ಠಾನ ಪ್ರಗತಿಯಲ್ಲಿದೆ.52 ವಿಶೇಷ ಆರ್ಥಿಕ ವಲಯಗಳಿಗೆ ಅನುಮೋದನೆ ನೀಡಲಾಗಿದೆ.

English summary
Karnataka Industry minister Murugesh Nirani is threatening me says a businessman Alam Pasha who now seeking Lokayukta help. Nirani and then CM Yeddyurappa have used Global Investors Meet 2010 to make illegal dealings, alloted permissions to their kins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X