ಚಾಣಕ್ಷ ಜಗನ್ ರೆಡ್ಡಿ, ಪೆದ್ದ ಬಳ್ಳಾರಿ ರೆಡ್ಡಿ

Jagan and Janardhan Reddy
ಹೈದರಾಬಾದ್, ಸೆ.12: ಒಂದೆಡೆ ಅಕ್ರಮ ಆಸ್ತಿ ಆರೋಪ ಹೊತ್ತು ಸತತವಾಗಿ ಸಿಬಿಐ ದಾಳಿಗೆ ತುತ್ತಾದರೂ ಎದೆಗುಂದದೆ ನಿಂತಿರುವ ವೈಎಸ್ ಜಗನ್ ರೆಡ್ಡಿ ಜಾಣತನದಿಂದ ಬಂಧನವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ ಅಕ್ರಮ ಗಣಿಗಾರಿಕೆ ಫಲವಾಗಿ ಬಂಧನಕ್ಕೊಳಗಾಗಿ ಚಿನ್ನದ ಪ್ಲೇಟ್ ಹಿಡಿಯುತ್ತಿದ್ದ ಕೈಲಿ ಅಲ್ಯುಮಿನಿಯಂ ಪ್ಲೇಟ್ ಹಿಡಿದು ದೈನ್ಯ ಸ್ಥಿತಿಯಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಪೆದ್ದ ಎನಿಸಿಕೊಂಡಿದ್ದಾರೆ.

ಜಗನ್ ನಿವಾಸ ಹಾಗೂ ಕಚೇರಿ ಮೇಲೆ ಸಿಬಿಐ ಸತತವಾಗಿ ದಾಳಿ ನಡೆಸಿದರೂ ಜಗನ್ ಮೈ ಮುಟ್ಟಲು ಆಗಿಲ್ಲ ಏಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜಕೀಯ ಚದುರಂಗದಾಟದಲ್ಲಿ ಯುವಯೋಧನಾದರೂ ಸಾಕಷ್ಟು ಚಾಣಾಕ್ಷತನ ಜಗನ್ ಗೆ ತನ್ನ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರಿಂದ ಕಲಿತ್ತಿದ್ದಾನೆ. ಜಗನ್ ಕೇಸ್ ನಲ್ಲಿ 4 ಹಾಲಿ ಸಚಿವರು, 15 ಐಎಎಸ್ ಅಧಿಕಾರಿಗಳು ಕೂಡಾ ಸಿಬಿಐ ಕುಣಿಕೆಯಲ್ಲಿದ್ದಾರೆ.

ಜಗನ್ ಸಾಮ್ರಾಜ್ಯಕ್ಕೆ ಸುಮಾರು 300 ಕಂಪನಿಗಳು ಪಾಲುದಾರಾರಾಗಿದ್ದಾರೆ. ವೈಎಸ್ ರಾಜಶೇಖರರೆಡ್ಡಿ ಆಡಳಿತದ ಸಂದರ್ಭದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದ ದೊಡ್ಡ ದೊಡ್ಡ ಕಂಪನಿಗಳು ಈಗ ಕೈಕೈ ಹಿಸುಕಿಕೊಳ್ಳುತ್ತಿದೆ. ಸಿಬಿಐ ದಾಳಿ ಭೀತಿಯಲ್ಲಿರುವ ಈ ಕಂಪನಿಗಳನ್ನು ಜಗನ್ ತನ್ನ ದಾಳವಾಗಿ ಬಳಸಿಕೊಳ್ಳುತ್ತಿದ್ದಾನೆ.

ಕೆಲವು ಕಂಪನಿಗಳು ಸಿಬಿಐಗೆ ಅಪ್ರೂವರ್ ಗಳಾಗಿ ಶರಣಾಗತಿ ಹೊಂದಿ ಒಂದೆರಡು ವರ್ಷದ ಜೈಲು ಶಿಕ್ಷೆ ಅನುಭವಿಸಲು ಸಿದ್ದವಾಗಿರುವ ಸುದ್ದಿ ಸಿಕ್ಕಿದೆ. ಆದರೆ. ಈ ಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿರುವ ಜಗನ್, ಕಂಪನಿಗಳಿಗೆ ಬೆದರಿಕೆ ಹಾಕಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾನೆ. ಎಲ್ಲಾ ಕಂಪನಿಗಳು ಸಿಬಿಐಗೆ ಶರಣಾದರೆ ಪ್ರಕರಣ ಇನ್ನಷ್ಟು ದಿನ ಎಳೆದಾಡುತ್ತಾ ಜಗನ್ ಬಂಧನ ವಿಳಂಬವಾಗುವ ಸಾಧ್ಯತೆಯಿದೆ.

2ಜಿ ಕೇಸ್ ನಂತೆ ವಿಚಾರಣೆಗೆ ಮುಂಚಿತವಾಗಿ ಸಾಕ್ಷಿಗಳು ಸಾವನ್ನಪ್ಪುವುದನ್ನು ತಪ್ಪಿಸಲು ಸಿಬಿಐ ಕಂಪನಿಗಳಿಗೆ ಅಭಯ ನೀಡುತ್ತಿದೆ. ಸಿಬಿಐ ಹಾಗೂ ಜಗನ್ ನಡುವೆ ಸಿಕ್ಕ ಕಂಪನಿಗಳು ತತ್ತರಿಸುತ್ತಿದೆ.

ಜನಾ ರೆಡ್ಡಿ ಸೋತಿದ್ದೇ ಇಲ್ಲಿ: ತನ್ನ ಸಹಾಯಕರು ಹಾಗೂ ಆಪ್ತರ ಹತ್ತಿರ ದಾಖಲೆಗಳನ್ನು ಬಚ್ಚಿಟ್ಟು ತಪ್ಪಿಸಿಕೊಳ್ಳುವ ಜನಾರ್ದನ ರೆಡ್ಡಿ ಕೊನೆ ಪ್ರಯತ್ನವನ್ನು ಸಿಬಿಐ ವಿಫಲಗೊಳಿಸಿದೆ. ಓಎಂಸಿ ಪಾಲುದಾರಿಕೆ ಹೊಂದಿರುವ ಕಂಪನಿಗಳ ಮೇಲೆ ಬಳ್ಳಾರಿ ರೆಡ್ಡಿಗಳ ಹಿಡಿತ ತಪ್ಪಿದು, ಸಿಬಿಐಗೆ ವರದಾನವಾಗಿದೆ.

ರೆಡ್ಡಿ ವಿಷಯದಲ್ಲಿ ಸಿಬಿಐ ನೇರವಾಗಿ ಬುಡಕ್ಕೆ ಕೈ ಹಾಕಿದೆ. ಜಗನ್ ವಿಷಯದಲ್ಲಿ ರೊಂಬೆ ಕೊಂಬೆ ಕತ್ತರಿಸಿ ನಂತರ ಮೂಲಬೇರಿಗೆ ಕೈ ಹಾಕಬೇಕಿದೆ. ಹಾಗಾಗಿ ಬಳ್ಳಾರಿ ರೆಡ್ಡಿಗಿಂತ ಜಗನ್ ಮೇಲುಗೈ ಸಾಧಿಸಿದ್ದು ಅಲ್ಲದೇ ಸಿಬಿಐಗೆ ಸವಾಲಾಗಿ ನಿಂತಿದ್ದಾರೆ. ರಾಜೀನಾಮೆ ಪ್ರಹಸನ, ಯುಪಿಎಗೆ ಬೆಂಬಲ ಘೋಷಣೆ, ಬಳ್ಳಾರಿ ರೆಡ್ಡಿ ಗೊತ್ತಿಲ್ಲ ಹೇಳಿಕೆ ಎಲ್ಲವೂ ಜಗನ್ ಚಾಣಾಕ್ಷತನ ನಡಿಗೆಗೆ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+