ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮರ್ಥ್ಯ ತೋರಲಿ ನಂತರ ಜೆಡಿಎಸ್ ಸೇರಲಿ

By Rohini Bellary
|
Google Oneindia Kannada News

Testing time for Sriramulu
ಜೆಡಿಎಸ್ ಸೇರುವ ಮುನ್ನ ಶ್ರೀರಾಮುಲು ಅವರು ಹೊಸ ಪಕ್ಷ ಕಟ್ಟಿ, ಮುಂಬರುವ ಚುನಾವಣೆಗಳಲ್ಲಿ ತಮ್ಮ ಸಾಮರ್ಥ್ಯ ತೋರಲಿ ಎಂಬುದು ದೇವೇಗೌಡರು ಕುಮಾರಸ್ವಾಮಿಗೆ ಇಟ್ಟ ಸಲಹೆ. ಇದಕ್ಕೆ ತಕ್ಕಂತೆ, ಗುಲಬರ್ಗಾ ಚುನಾವಣೆಯಂತೆ ಕೊಪ್ಪಳ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಗೆ ಶ್ರೀರಾಮುಲು ಪರೋಕ್ಷವಾಗಿ ಬೆಂಬಲ ನೀಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನವೇ ಸ್ಪೀಕರ್ ಬೋಪಯ್ಯ ಶ್ರೀರಾಮುಲು ರಾಜೀನಾಮೆ ಅಂಗೀಕರಿಸಿದ್ದರೆ, ಪೂರ್ವಭಾವಿಯಾಗಿ ನಿರ್ಧರಿಸಿದಂತೆ ಹೊಸ ಪಕ್ಷದಿಂದ ಸ್ಪರ್ಧಿಸಲಿದ್ದರು. ಆಗ, ಈ ಚುನಾವಣೆಯಲ್ಲಿ ಜೆಡಿಎಸ್ ಪ್ರತ್ಯಕ್ಷವಾಗಿ - ಪರೋಕ್ಷವಾಗಿ ಶ್ರೀರಾಮುಲುಗೆ ಬೆಂಬಲ ನೀಡುವ ಯೋಜನೆ ಹೊಂದಿತ್ತು. ಈಗಲೂ ಕೂಡ ಶ್ರೀರಾಮುಲು ಮಾನಸಿಕವಾಗಿ ಜೆಡಿಎಸ್ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ವರಿಷ್ಠರು ಈ ಎಲ್ಲಾ ಮಾಹಿತಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯ ಮೇಲೆ ಛಾಯೆ ಆವರಿಸಬಾರದು ಎಂದು ಲೆಕ್ಕಾಚಾರ ಹಾಕಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ನಂತರ ಶ್ರೀರಾಮುಲು ರಾಜೀನಾಮೆಯನ್ನು ಅಂಗೀಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಸ್ತುತ ಸ್ಪೀಕರ್ ಬೋಪಯ್ಯ 'ಟೈಮ್ ಕಿಲ್ಲಿಂಗ್" ತಂತ್ರ ಅನುಸರಿಸುತ್ತಿದ್ದಾರೆ.

ಶ್ರೀರಾಮುಲು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಚುನಾವಣೆ ಎದುರಿಸುವಷ್ಟರಲ್ಲಿ ಅವರ ವರ್ಚಸ್ಸು - ಹಣ, ಜನಬೆಂಬಲ - ಸಂಘಟನಾ ಚತುರತೆ ಹೇಗಿರುತ್ತದೆ ಎನ್ನುವುದರ ಮೇಲೆ ದೃಷ್ಟಿ ನೆಟ್ಟಿರುವ ದೇವೇಗೌಡರು, ಆ ದಿನಗಳಿಗಾಗಿ ಈಗಿನಿಂದಲೇ ತಂತ್ರಗಾರಿಕೆ ನಡೆಸಿದ್ದಾರೆ.

English summary
If everything has gone according to the planning Sriramulu would have joined JDS with Janardhana Reddy's followers. But, HD Deve Gowda has asked HDK to go slow and allow Sriramulu to prove his capabilities to launch new party. Now the ball is in Sriramulu's court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X