ಶ್ರೀರಾಮುಲು ಎಚ್ಡಿಕೆ ಮೈತ್ರಿಕೂಟಕ್ಕೆ ಗೌಡರ ಅಡ್ಡಗಾಲು
ಬಳ್ಳಾರಿ,
ಸೆ. 12 : ಜನಾರ್ದನ ರೆಡ್ಡಿ ಬಂಧನವಾಗಿ ರಾಜಕೀಯ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗದಿದ್ದರೆ ಇಷ್ಟೊತ್ತಿಗೆ ಮಾಜಿ ಸಚಿವ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿಯವರ ಬೆಂಬಲಿಗರು ಜೆಡಿಎಸ್ ಸೇರಿರುತ್ತಿದ್ದರು. ಆದರೆ, ಇದಕ್ಕೆ ಅಡ್ಡಗಾಲು ಹಾಕಿದ್ದು ದಶಕಗಳ ಕಾಲ ರಾಜಕೀಯ ಪಲ್ಲಟಗಳನ್ನು ಕಂಡಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು. id="toptextpromo">ಅಕ್ರಮ
ಗಣಿಗಾರಿಕೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಬಂಧಿತರಾಗುತ್ತಿದ್ದಂತೆ ಮತ್ತು ಆರೋಪಿ ಸ್ಥಾನದಲ್ಲಿರುವ ಶ್ರೀರಾಮುಲು ಸಿಬಿಐನಿಂದ ಬಂಧಿತರಾಗುವ ಭೀತಿಯಲ್ಲಿ ದಿನ ದೂಡುತ್ತಿರುವ ಸಮಯದಲ್ಲಿ ಹುಷಾರಾದ ದೇವೇಗೌಡರು 'ಕುಮಾರ, ದುಡುಕಬೇಡ. ಸ್ವಲ್ಪ ತಡಿ' ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸುತ್ತಿವೆ. id='are-slot-1' class='oiad oi-axt oiadv'> id='top-searched-articles'>ಕೆಲ
ದಿನಗಳ ಹಿಂದೆ ಬಸವನಗೌಡ ಪಾಟೀಲ ಯತ್ನಾಳ ಅವರ ಮಧ್ಯಸ್ಥಿಕೆಯಲ್ಲಿ ಬದ್ಧ ವೈರಿಗಳಾಗಿದ್ದ ಶ್ರೀರಾಮುಲು ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ರಹಸ್ಯವಾಗಿ ಭೇಟಿಯಾಗಿ, ಮುಂದಿನ ರಾಜಕೀಯ ನಡೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದರು. ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ, ಯಾರೂ ವೈರಿಯಲ್ಲ!











Click it and Unblock the Notifications