ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಟ್ರಾಫಿಕ್ ಪೊಲೀಸ್ ಫೇಸ್ ಬುಕ್ಗೆ ಲಗ್ಗೆ

By Mahesh
|
Google Oneindia Kannada News

Mysote city police enters facebook
ಮೈಸೂರು, ಸೆ.12: ಮೈಸೂರು ನಗರ ಪೊಲೀಸ್‌ ಘಟಕ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಗೆ ಲಗ್ಗೆ ಇಟ್ಟಿದೆ. ಫೇಸ್‌ಬುಕ್‌ ಮುಖಾಂತರ ನೀಡಲು ಉತ್ತಮ ವೇದಿಕೆ ನಿರ್ಮಿಸಿ, ಆನ್ ಲೈನ್ ದೂರು ಸೌಲಭ್ಯವನ್ನು ನಾಗರೀಕರಿಗೆ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್ ಹೇಳಿದ್ದಾರೆ.

ರಸ್ತೆ ಬಳಕೆದಾರರ ತಿಳುವಳಿಕೆಗಾಗಿ ಸಂಚಾರ ನಿಯಮಗಳು, ಸೂಚಕಗಳು, ಅಪರಾಧಗಳು, ದಂಡದ ಪ್ರಮಾಣ ಮತ್ತು ರಸ್ತೆ ಅಪಘಾತಗಳ ಅಂಕಿಅಂಶಗಳ ಬಗ್ಗೆ ನಾಗರೀಕರಿಗೆ ಅರಿವು ಮೂಡಿಸಲು ಮೈಸೂರು ನಗರ ಸಂಚಾರ ಪೊಲೀಸರು ಸಂಚಾರ ಮತ್ತು ಅಪರಾಧ ಉಪ ಪೊಲೀಸ್‌ ಆಯುಕ್ತ ಪಿ. ರಾಜೇಂದ್ರ ಪ್ರಸಾದ್‌ ರವರ ನೇತೃತ್ವದಲ್ಲಿ ಫೇಸ್ ಬುಕ್ ಪೇಜ್ ಆಗು ಹೋಗುಗಳು ದಾಖಲಾಗುತ್ತದೆ.

ದೂರು ನೀಡೋದು ಸುಲಭ: ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಬಗ್ಗೆ ಮಾಹಿತಿ ಫೇಸ್ ಬುಕ್ ಪೇಜ್ ವಾಲ್ ನಲ್ಲಿ ನೇರವಾಗಿ ಸಾರ್ವಜಕರು ಬರೆಯಬಹುದು. ಸಂಚಾರ ನಿಯಮಗಳ ಬಗ್ಗೆ ಹೊರಡಿಸುವ ಪ್ರಮುಖ ಪ್ರಕಟನೆಗಳನ್ನು ಈ-ಮೇಲ್‌ ಮತ್ತು ಎಸ್‌ಎಂಎಸ್‌ ಮುಖಾಂತರ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ, ಏಕಮುಖ ಸಂಚಾರ, ಗಣ್ಯ ವ್ಯಕ್ತಿಗಳ ಸಂಚಾರ ಮಾರ್ಗ ಮತ್ತು ತಾತ್ಕಾಲಿಕ ರಸ್ತೆ ನಿರ್ಬಂಧಗಳ ವಿವರವನ್ನು ಎಸ್‌ಎಂಎಸ್‌ ಮೂಲಕ ತಿಳಿಸಲು ಯೋಜಿಸಲಾಗಿದೆ.

ಈ-ಮೇಲ್‌ ಮುಖಾಂತರ ಸಂಚಾರ ಪೊಲೀಸರನ್ನು ನಾಗರೀಕರು ಸಂಪರ್ಕಿಸಬಹುದಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆ ಬಗ್ಗೆ ತಮ್ಮಲ್ಲಿರುವ ಫೋಟೋ/ವಿಡಿಯೋಗಳನ್ನು ದಾಖಲಿಸಬಹುದಾಗಿದೆ. ನಾಗರೀಕರು ಫೇಸ್‌ಬುಕ್‌ ಮುಖಾಂತರ ಪೊಲೀಸರನ್ನು ಸಂಪರ್ಕಿಸಿ ಈ ಜಾಲದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಆಯುಕ್ತ ಸುನೀಲ್ ಅಗರವಾಲ್ ಮನವಿ ಮಾಡಿದ್ದಾರೆ.

English summary
Mysore city police traffic department has entered social networking site facebook. Mysore Traffic police page has rules, online complaints, message from police commissioner and statistics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X