ರಾಜ್ಯ ಹೈಕೋರ್ಟ್ ಹೊಸ ಮುಖ್ಯ ನ್ಯಾ.ವಿಕ್ರಮಜಿತ್ ಸೇನ್ ?

ನ್ಯಾ. ಕೇಹರ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡಲು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಕೆಲ ದಿನಗಳ ಹಿಂದೆಯೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಶಿಫಾರಸು ಮಾಡಿತ್ತು. ಶನಿವಾರ ನೇಮಕಾತಿ ಆದೇಶ ಪ್ರಕಟವಾಗಿದ್ದು, ನ್ಯಾ.ಕೇಹರ್ ಅವರು ಸೋಮವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ಬಿಡುಗಡೆ ಹೊಂದುವರು.
ಸೋಮವಾರ ನ್ಯಾ. ಕೇಹರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದ್ದು, ಅದೇ ದಿನ ನ್ಯಾ. ವಿಕ್ರಮಜಿತ್ ಸೇನ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ. ಕೇಹರ್ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ವರ್ಗಾವಣೆ ಮಾಡಲಾಗಿತ್ತು. 2010ರ ಆಗಸ್ಟ್ 8ರಂದು ಅವರು ಅಧಿಕಾರ ಸ್ವೀಕರಿಸಿದ್ದರು.
ನ್ಯಾ.ಸೇನ್ ಪರಿಚಯ: ನ್ಯಾ. ವಿಕ್ರಮಜಿತ್ ಸೇನ್ ಅವರು 1950ರ ಡಿಸೆಂಬರ್ 31ರಂದು ಜನಿಸಿದ್ದು, ಪ್ರಾಥಮಿಕ ಹಂತದಿಂದ ಪದವಿವರೆಗಿನ ಶಿಕ್ಷಣವನ್ನು ದೆಹಲಿಯಲ್ಲೇ ಪೂರೈಸಿದ್ದಾರೆ. ಕಾನೂನು ಪದವಿ ಪಡೆದ ಬಳಿಕ ವಿವಿಧ ನ್ಯಾಯಾಲಯಗಳಲ್ಲಿ ವಕೀಲಿ ವೃತ್ತಿ ನಡೆಸಿದ ಅವರು, 1999ರ ಜುಲೈ 7ರಂದು ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಹೊಂದಿದರು.
2000ನೇ ಇಸವಿ ಅಕ್ಟೋಬರ್ 30ರಂದು ಕಾಯಂ ನ್ಯಾಯಮೂರ್ತಿಯಾಗಿ ನೇಮಕವಾದರು. ನ್ಯಾ. ಕೇಹರ್ ಅವರು ಸುಪ್ರೀಂಕೋರ್ಟ್‌ಗೆ ತೆರಳುತ್ತಿರುವುದರಿಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆ ತೆರವಾಗುತ್ತಿದೆ.












Click it and Unblock the Notifications