ಕರಾವಳಿಯಲ್ಲಿ ಕ್ರೈಸ್ತರ ಸಂಭ್ರಮದ ಮೋಂತಿಹಬ್ಬ

ಹೊಸ ಭತ್ತದ ತೆನೆಯನ್ನು ಮೆರವಣಿಗೆಯಲ್ಲಿ ಚರ್ಚ್ ಗೆ ತಂದು ಧರ್ಮಗುರುಗಳಿಂದ ಆಶೀರ್ವಾದ ಪಡೆಯುವುದು ಪದ್ಧತಿ. ಪ್ರಸ್ತುತ ವರ್ಷ ಉತ್ತಮ ಫಸಲು ಒದಗಿಸಿದ ದೇವರಿಗೆ ನಮಿಸುವುದು ಇದರ ಹಿಂದಿರುವ ನಂಬಿಕೆ.
ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವನ್ನು ಸೆ. 8ರಂದು ಆಚರಿಸಲಾಗುತ್ತಿದೆ. ಮೇರಿ ಮಾತೆ 'ದೇವ ಮಾತೆ' ಆಗಿದ್ದು, ಪವಾಡಗಳನ್ನು ಸೃಷ್ಟಿಸುತ್ತಾರೆ ಎನ್ನುವುದು ಕ್ರೈಸ್ತರ ನಂಬಿಕೆಯಾಗಿದೆ.
ಮಹಿಳೆಯರು ಮತ್ತು ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಅರ್ಪಿಸಿ ಭಕ್ತಿಯಿಂದ ನಮನ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮಗಳು ಮುಗಿದ ಬಳಿಕ ಭತ್ತದ ತೆನೆಯನ್ನು ಮನೆಗೆ ತರಲಾಗುವುದು. ಮಧ್ಯಾಹ್ನ ಕುಟುಂಬಿಕರು ಸಹ ಭೋಜನದಲ್ಲಿ ಭಾಗಿಯಾಗುತ್ತಾರೆ. ಈದಿನದ ಊಟದ ವಿಶೇಷವೆಂದರೆ ಮಾಂಸಾಹಾರವಿಲ್ಲ, ಶುದ್ಧ ಸಸ್ಯಾಹಾರ ಮಾತ್ರ.












Click it and Unblock the Notifications