ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: 5 ಸಾವು

By Srinath
|
Google Oneindia Kannada News

earthquake-jolts-indonesia-7-sept-5-dead
ಜಕಾರ್ತಾ, ಸೆ.7: ಪಶ್ಚಿಮ ಇಂಡೋನೇಷ್ಯಾದಲ್ಲಿ ಇಂದು ಬಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ತಕ್ಷಣದ ವರದಿಗಳ ಪ್ರಕಾರ ಕನಿಷ್ಠ 5 ಮಂದಿ ಸಾವಿಗೀಡಾಗಿದ್ದಾರೆ. 6.6 ತೀವ್ರತೆಯ ಭೂಕಂಪವು ನಸುಕಿನಲ್ಲಿ ಸಂಭವಿಸಿದ್ದು, ಜನ ದುಃಸ್ವಪ್ನ ಕಂಡವರಂತೆ ಮನೆಗಳಿಂದ ಹೊರಗೋಡಿ ಬಂದಿದ್ದಾರೆ.

ಭೂಮಿಯೊಳಗೆ 110 ಕಿ.ಮೀ. ದೂರದಲ್ಲಿ ಮೇಡಾನ್ ನಗರದಿಂದ 100 ಕಿ. ಮೀ. ಆಳದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು ಎಂದು ಅಮೆರಿಕದ ಭೂಗರ್ಭಶಾಸ್ತ್ರ ಮತ್ತು ಹವಾಮಾನ ಇಲಾಖೆ ದೃಢ ಪಡಿಸಿದೆ. ಸುಮಾತ್ರ ದ್ವೀಪದ ಸುತ್ತಮುತ್ತಲ ಗ್ರಾಮಸ್ಥರು ಭೀತಿಯಿಂದ ಕಂಗೆಟ್ಟಿದ್ದಾರೆ. ಆದರೆ ಸದ್ಯಕ್ಕೆ ಸುನಾಮಿ ಎಚ್ಚರಿಕೆಯನ್ನು ಘೋಷಿಸಿಲ್ಲ.

ಇಂಡೋನೇಷ್ಯಾ ಭೂಕಂಪ ವಲಯದಲ್ಲಿದ್ದು, ಇಲ್ಲಿ ಅಗ್ನಿಪರ್ವತಗಳು ಆಗಾಗ ರುದ್ರನರ್ತನ ಮಾಡುತ್ತಿರುತ್ತವೆ. 2004ರ ಡಿಸೆಂಬರ್ 4ರಂದು ಇಲ್ಲಿ ಸಂಭವಿಸಿದ ಭಾರಿ ಭೂಕಂಪದಿಂದ ಹಿಂದೂ ಮಹಾಸಾಗರದಲ್ಲಿ ಸುನಾಮಿ ಅಪ್ಪಳಿಸಿ, ಲಕ್ಷಾಂತರ ಮಂದಿಯನ್ನು ಆಹುತಿ ತೆಗೆದುಕೊಂಡ ಭೀಕರ ದೃಶ್ಯಗಳು ಇನ್ನೂ ಹಸಿಯಾಗಿ ಉಳಿದಿವೆ.

English summary
A powerful earthquake jolted western Indonesia this morning (Sep 7th), killing three people. The magnitude-6.6 quake hit about 1 am, waking people in towns and villages across Sumatra island’s northern tip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X