ಕೇಂದ್ರದ ಮೃದು ಧೋರಣೆಯೇ ಕೋರ್ಟ್ ಸ್ಫೋಟಕ್ಕೆ ಕಾರಣ
ಮಡಿಕೇರಿ,
ಸೆ.7: ಇಂದು ದೆಹಲಿ ಕೋರ್ಟ್ ಬಳಿ ಸಂಭವಿಸಿದ ಸ್ಫೋಟಕ್ಕೆ ಕೇಂದ್ರ ಸರಕಾರವೇ ಕಾರಣ. ಉಗ್ರರ ಬಗ್ಗೆ ಮೃದು ಧೋರಣೆ ತಾಳದೆ ಆಗಿಂದಾಗ್ಗೆ ಶಿಕ್ಷೆ ವಿಧಿಸಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂದು ರಾಜ್ಯ ಗೃಹ ಸಚಿವ ಆರ್. ಅಶೋಕ್ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. id="toptextpromo">ಮಡಿಕೇರಿಯಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಅಫ್ಜಲ್ ಗುರು ಮತ್ತು ಕಸಬ್ ಅಂತಹ ಉಗ್ರರಿಗೆ ಗಲ್ಲು ಶಿಕ್ಷೆ ವಿಧಿಸದೆ ಕೇಂದ್ರ ಸರಕಾರ ಹೊಣೆಗೇಡಿತನ ತೋರುತ್ತಿದೆ. ಇದರಿಂದಾಗಿ ಜನರೊಂದಿಗೆ ಪ್ರಾಣ ಚೆಲ್ಲಾಟ ನಡೆಸುತ್ತಿದೆ. ಇನ್ನಾದರೂ ಕೇಂದ್ರ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಆದೇಶಿಸಲಾಗಿದೆ. ಬೆಂಗಳೂರಿನಲ್ಲಿ ಹೈಕೋರ್ಟಿಗೆ ಕಾಯಂ ಆಗಿ ವಿಶೇಷ ಭದ್ರತಾ ವ್ಯವಸ್ಥೆ ಏರ್ಆಡುಮಾಡುವ ಬಗ್ಗೆ ಉನ್ನತ ಸಭೆ ನಡೆಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.











Click it and Unblock the Notifications