ಬಳ್ಳಾರಿಯಲ್ಲಿ 8 ಲಕ್ಷ ರು. ನಗದು ಚಿನ್ನದೊಡವೆ ಲೂಟಿ

ಘಟನೆ ನಡೆದಿದ್ದು ಬಳ್ಳಾರಿಯಿಂದ 10 ಕಿ.ಮೀ. ದೂರದಲ್ಲಿರುವ ವೇಣಿ ವೀರಾಪುರ ಎಂಬ ಗ್ರಾಮದಲ್ಲಿ. ಬಲವಂತವಾಗಿ ವೆಂಕಟಪ್ಪ ಎಂಬುವವರ ಮನೆಗೆ ನುಗ್ಗಿದ ದರೋಡೆಕೋರರು ಮನೆಮಂದಿಯನ್ನು ಹಗ್ಗದಿಂದ ಕಟ್ಟಿಹಾಕಿದೆ.
ದರೋಡೆಗೆ ತಡೊಯೊಡ್ಡಿದ 60 ವರ್ಷದ ಹಿರಿಯ ಮಹಿಳೆಯನ್ನು ಕಳ್ಳರು ಥಳಿಸಿದ್ದಾರೆ. ನಂತರ ಮನೆಯಲ್ಲಿ ಇಟ್ಟಿದ್ದ 8 ಲಕ್ಷ ರು. ನಗದು ಮತ್ತು ಚಿನ್ನದ ಒಡವೆಗಳನ್ನು ಬಳಿದುಕೊಂಡು ಕಾಲಿಗೆ ಬುದ್ಧಿ ಹೇಳಿದ್ದಾರೆ. ಪೊಲೀಸ್ ಸುಪರಿಂಟೆಂಡ್ ಚಂದ್ರ ಗುಪ್ತಾ ಅವರು ಸ್ಥಳಕ್ಕೆ ಭೇಟಿ ನೀಡಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಜನಾರ್ದನ ರೆಡ್ಡಿ ಅವರ ಮನೆಯಲ್ಲಿ ಭಾರೀ ಪ್ರಮಾಣದ ಹಣ ಮತ್ತು ಚಿನ್ನಾಭರಣಗಳು ದೊರೆತಿರುವ ಸಂದರ್ಭದಲ್ಲಿಯೇ ಹತ್ತಿರದ ಹಳ್ಳಿಯಲ್ಲಿ ಲೂಟಿಯಾಗಿರುವುದು ನಾನಾ ಊಹಾಪೋಹಗಳಿಗೆ ದಾರಿಮಾಡಿ ಕೊಟ್ಟಿದೆ.












Click it and Unblock the Notifications