ಸ್ವಯಂ ನಿವೃತ್ತಿ ಪಡೆದು ಅರಮನೆ ಸೇರಿಕೊಂಡ ರೆಡ್ಡಿ ಭಾವ

ಸುಧಾಕರ್ ಅವರು ಈಗ್ಗೆ ಐದು ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ತೆಗೆದುಕೊಂಡು ಶ್ರೀಕಾಳಹಸ್ತಿಯಲ್ಲಿ ನೆಲೆಸಿದರು.
ಸ್ಥಳೀಯರು ಹೇಳುವ ಪ್ರಕಾರ ರೆಡ್ಡಿ ತಮ್ಮ ಅಕ್ಕನಿಗಾಗಿ ಅರಮನೆಯಂತಹ ಮನೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ ಇದು ಊರ ಹೊರಗೆ ಇದೆ. ಜನಾ ರೆಡ್ಡಿ ಹೆಲಿಕಾಪ್ಟರ್ 'ರುಕ್ಮಿಣಿ' ಜತೆ ಇಲ್ಲಿಗೆ ಆಗಾಗ ಬಂದಿಳಿಯುತ್ತಿದ್ದರು ಎನ್ನುತ್ತಾರೆ ಊರಿನ ಜನ.
ಆದರೆ ಸುಧಾಕರ್ ಆಗಲಿ ಅಥವಾ ಜನಾ ರೆಡ್ಡಿಯಾಗಲಿ ಸ್ಥಳೀಯ ಗೆಳೆಯರನ್ನು ಅರಮನೆಯಂತಹ ಈ ಮನೆಯೊಳಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದಲಂತೂ ನಮ್ಮನ್ನು ಬಂಗಲೆಯ ಸಮೀಪಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ಸುಧಾಕರ್ ಅವರ ಮಗಳ ಮದುವೆಯನ್ನು ಐಎಎಸ್ ಅಧಿಕಾರಿಯೊಬ್ಬರ ಪುತ್ರನ ಜತೆ ಬೆಂಗಳೂರಿನಲ್ಲಿ ಅತ್ಯಂತ ಅದ್ದೂರಿಯಾಗಿ ಇತ್ತೀಚೆಗೆ ಮಾವ ಜನಾರ್ದನ ರೆಡ್ಡಿ ನಡೆಸಿಕೊಟ್ಟಿದ್ದರು. ಮದುವೆಗೆ 10 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿದ್ದರು. ಸಿಬಿಐನಿಂದ ಬಂಧನಕ್ಕೊಳಗಾಗಿ ಹೈದರಾಬಾದಿನ ಚಂಚಲಗೂಡ ಕೇಂದ್ರ ಕಾರಾಗೃಹ ಪ್ರವೇಶಿಸಿರುವ ಗಣಿವೀರ ಜನಾರ್ದನ ರೆಡ್ಡಿಗೆ ಈಗ ಕೈದಿ ನಂ. 697 ಸಂಖ್ಯಾಪಟ್ಟಿ ಪ್ರಾಪ್ತಿಯಾಗಿದೆ.












Click it and Unblock the Notifications