ಚಾಂಪಿಯನ್ಸ್ ಲೀಗ್ ಟಿ20ಯಲ್ಲೂ ಸಚಿನ್ ಡೌಟ್

ಸಚಿನ್ ಸಂಪೂರ್ಣವಾಗಿ ಗುಣಮುಖರಾಗಲು ವೈದ್ಯರು ನಾಲ್ಕು ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ ಎಂದು ತಂಡದ ಮ್ಯಾನೇಜರ್ ಶಿವಲಾಲ್ ಯಾದವ್ ಹೇಳಿದ್ದಾರೆ. ಹೀಗಾಗಿ ಸೆ. 19ರಿಂದ ಆರಂಭವಾಗುವ ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಪಂದ್ಯಾವಳಿಯಿಂದ ಹೊರಗುಳಿಯಬೇಕಾಗಿದೆ. ಸಚಿನ್ ನೂರನೇ ಅಂತಾರಾಷ್ಟ್ರೀಯ ಶತಕಕ್ಕಾಗಿ ಅಭಿಮಾನಿಗಳು ಇನ್ನಷ್ಟು ಸಮಯ ಕಾಯಬೇಕಾಗಿದೆ.
ಗಾಯಾಳುಗಳ ತಂಡ : ಇಂಗ್ಲೆಂಡ್ ಪ್ರವಾಸ ನಿರತ ಟೀಂ ಇಂಡಿಯಾದ ಗಾಯಾಳುಗಳ ತಂಡ ಕಟ್ಟಿದರೆ ಸಚಿನ್ 8ನೇ ಆಟಗಾರರಾಗುತ್ತಾರೆ. ಸೆಹ್ವಾಗ್(ಭುಜ ನೋವು), ಯುವರಾಜ್(ಕೈ ನೋವು), ಹರ್ಭಜನ್(ಉದರ ಬೇನೆ), ಇಶಾಂತ್‌ಶರ್ಮಾ(ಸ್ನಾಯು ಸೆಳೆತ), ಜಹೀರ್ ಖಾನ್(ಸ್ನಾಯು ಸೆಳೆತ, ಕಾಲುನೋವು), ಗಂಭೀರ್ (ತಲೆ, ಕಣ್ಣು ನೋವು) ಮತ್ತು ರೋಹಿತ್ ಶರ್ಮ(ಕೈ ಬೆರಳು ಗಾಯ) ಜೊತೆ ಸಚಿನ್ ಸೇರಲಿದ್ದಾರೆ.
ಬದಲಿಗೆ ಆಟಗಾರರಿಗೆ ಚಾನ್ಸ್ : ರೋಹಿತ್ ಶರ್ಮ ಬದಲಿಗೆ ಮನೋಜ್ ತಿವಾರಿ ಹಾಗೂ ಸಚಿನ್ ಬದಲಿಗೆ ಎಸ್ ಬದರಿನಾಥ್ ಸ್ಥಾನ ಪಡೆದಿದ್ದಾರೆ.
2ನೇ ಏಕದಿನ ಪಂದ್ಯ ಮಂಗಳವಾರ ಸೌಂಥಾಪ್ಟನ್ ನಲ್ಲಿ ನಡೆಯಲಿದ್ದು, ಎರಡೂ ತಂಡಗಳ ನೆತ್ತಿ ಮೇಲೆ ಕಾರ್ಮೋಡ ಕವಿದಿದ್ದು, ಮಳೆರಾಯನೇ ಅಂಪೈರ್ ಆಗಲಿದ್ದಾನೆ. ತಂಡದಲ್ಲಿ ಅಲ್ಪಸ್ವಲ್ಪ ಬದಲಾವಣೆ ಕಾಣಬಹುದಾಗಿದೆ. [ವೇಳಾಪಟ್ಟಿ ನೋಡಿ]
ಭಾರತ ತಂಡದಲ್ಲಿ ವೇಗಿ ವಿನಯ್ ಕುಮಾರ್ ಬದಲಿಗೆ ಅರೋನ್ ಅಥವಾ ಸ್ಪಿನ್ನರ್ ಅಮಿತ್ ಮಿಶ್ರಾ ಸ್ಥಾನ ಪಡೆದರೆ ಅಚ್ಚರಿಯೇನಿಲ್ಲ. ಇಂಗ್ಲೆಂಡ್ ತಂಡದಲ್ಲಿ ಕೀಪರ್ ಹಾಗೂ ಆರಂಭಿಕ ಆಟಗಾರ ಕೀಸ್ವೆಟರ್ ಸ್ಥಾನಕ್ಕೆ ಕುತ್ತು ಬರಬಹುದು. ಸ್ವಾನ್ ಬದಲಿಗೆ ಸಮಿತ್ ಪಟೇಲ್ ಅನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.












Click it and Unblock the Notifications