ಗಾಲಿ ರೆಡ್ಡಿ, ಜಗನ್ ಸಮ ಭಾಗಿಗಳು: ಚಂದ್ರಬಾಬು ನಾಯ್ಡು

ಅಕ್ರಮ ಗಣಿಗಾರಿಕೆ, ಗಡಿ ಭಾಗದ ಭೂ ಕಬಳಿಕೆ, ವಂಚನೆ ಪ್ರಕರಣದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಇಬ್ಬರು ಸಮಭಾಗಿಗಳಾಗಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ಟಿಡಿಪಿ ನಡೆಸಿದ ಹೋರಾಟಕ್ಕೆ ಬೆಲೆ ಸಿಕ್ಕಿದೆ. ವೈಎಸ್ ರಾಜಶೇಖರ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಅಕ್ರಮ ವ್ಯವಹಾರಗಳಿಗೆ ಮಾಧ್ಯಮಗಳು ಕೂಡಾ ಕೈಜೋಡಿಸಿದ್ದು ವಿಷಾದನೀಯ.
ಸಾಕ್ಷಿ ಟಿವಿ, ಪತ್ರಿಕೆಗಳನ್ನು ಅಕ್ರಮ ವ್ಯವಹಾರಗಳಿಗೆ ಇಂಬು ನೀಡಿದೆ. ಜಗನ್ ಅಕ್ರಮ ಆಸ್ತಿಯನ್ನು ಜಪ್ತಿ ಮಾಡಿ ಸಾರ್ವಜನಿಕರಿಗೆ ಹಂಚಬೇಕು. ಗಡಿ, ಗಣಿ ವಿಷಯದಲ್ಲಿ ಆಟ ಆಡಿರುವ ರೆಡ್ಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ವೈಎಸ್ ಜಗನ್ ಅವರ ಅಕ್ರಮ ಆಸ್ತಿ ತನಿಖೆ ಜೊತೆಗೆ ಜನಾರ್ದನ ರೆಡ್ಡಿ ಆಸ್ತಿ ತನಿಖೆಗೂ ಮುಂದಾಗಬೇಕು ಎಂದು ನಾಯ್ಡು ಆಗ್ರಹಿಸಿದ್ದಾರೆ.












Click it and Unblock the Notifications