ಎಚ್ಡಿಕೆ ದಂಪತಿ ಬೇಲ್ ಸಿಗದಿದ್ದರೆ, ಬಂಧನ ಖಚಿತ

Kumaraswamy must appear in Lokayukta Court
ಬೆಂಗಳೂರು, ಸೆ.5: ಜಂತಕಲ್ ಮೈನಿಂಗ್ ಕಂಪೆನಿಗೆ ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಿಗೆ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತವರ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸೋಮವಾರ(ಸೆ.5) ಬೆಳಗ್ಗೆ ಗೈರು ಹಾಜರಾಗಿದ್ದಾರೆ.

ಜಂತಕಲ್ ಮೈನಿಂಗ್ ಕಂಪೆನಿ ಗುತ್ತಿಗೆ ಹಾಗೂ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘ ಡಿನೋಟಿಫೈ ಅವ್ಯವಹಾರ ಪ್ರಕರಣದ ವಿಚಾರಣೆ ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಬೆಳಗ್ಗೆ 10.50ರ ಸುಮಾರಿಗೆ ಆರಂಭವಾಯಿತು. ಆದರೆ, ಪ್ರಮುಖ ಆರೋಪಿಗಳ ಗೈರು ಹಾಜರಿಯ ನಂತರ ಪ್ರಕರಣ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ.

ಬೇಲ್ ಸಿಗದಿದ್ದರೆ ಬಂಧನ: ಎಚ್ಡಿಕೆ ದಂಪತಿಗಳು ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು, ಆ ಅರ್ಜಿ ಮೇಲೆ ವಿಚಾರಣೆ ಕೂಡಾ ಮಧ್ಯಾಹ್ನ ನಡೆಯಲಿದೆ. ಕೋರ್ಟ್ ಜಾಮೀನು ನಿರಾಕರಿಸಿದರೆ ಹಾಗೂ ಆರೋಪ ಮೇಲ್ನೋಟಕ್ಕ ಸಾಬೀತಾದರೆ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗಾದಂತೆ ಎಚ್ಡಿಕೆ ದಂಪತಿಗೂ ನ್ಯಾಯಾಂಗ ಬಂಧನ ಶಿಕ್ಷೆ ಕಾದಿದೆ.

ವಕೀಲ ವಿನೋದ್‌ಕುಮಾರ್ ಎಂಬವರು ಸಲ್ಲಿಸಿರುವ ದೂರಿನ ವಿಚಾರಣೆಗಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಆ.30ರಂದು ಸಮನ್ಸ್ ಜಾರಿಯಾಗಿತ್ತು.

ಕುಮಾರಸ್ವಾಮಿ ಪರ ವಕೀಲ ಹಶ್ಮತ್ ಪಾಶಾ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಲೋಕಾಯುಕ್ತ ನ್ಯಾಯಾಧೀಶ ಸುಧೀಂದ್ರರಾವ್ ಅವರು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ್ದರು. ಪ್ರಕರಣದ ಮತ್ತೊಬ್ಬ ಆರೋಪಿ ಜಂತಕಲ್ ಮೈನಿಂಗ್ ಸಂಸ್ಥೆಯ ಮುಖ್ಯಸ್ಥ ವಿನೋದ್ ಗೋಯಲ್ ಕೂಡ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+