ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಮೇಲಿರುವ ಆರೋಪಗಳ ಅಸಮಗ್ರ ಪಟ್ಟಿ

By Mahesh
|
Google Oneindia Kannada News

Janardhan Reddy Chargesheet details
ಹೈದರಾಬಾದ್, ಸೆ. 5: ಓಬಳಾಪುರಂ ಗಣಿಗಾರಿಕೆ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ವಿವಿಧ ಕಲಂಗಳಡಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಹಾಗೂ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬಿವಿ ಶ್ರೀನಿವಾಸ್ ಅವರ ಮೇಲೆ ಆರೋಪ ಪಟ್ಟಿಯನ್ನು ಸಿಬಿಐ ವಿಶೇಷ ನ್ಯಾಯಲಯಕ್ಕೆ ಸಲ್ಲಿಸಲಾಗಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮೇಲೆ 2009ರ ಡಿ.7 ರಲ್ಲಿ ಸುಮಾರು 7 ಕೇಸ್ ಗಳನ್ನು ದಾಖಲಿಸಲಾಗಿದೆ. ಒಳಸಂಚು, ವಂಚನೆ ಸೇರಿದಂತೆ ಹಲವಾರು ಆರೋಪಗಳನ್ನು ಹೊರೆಸಿ ಚಾರ್ಚ್ ಶೀತ್ ತಯಾರಿಸಲಾಗಿದೆ. ರೆಡ್ಡಿ ಅವರ ಮೇಲಿರುವ ಆರೋಪಗಳ ಅಸಮಗ್ರ ಪಟ್ಟಿ ಇಲ್ಲಿದೆ.

* ಭಾರತೀಯ ದಂಡ ಸಂಹಿತೆ ಕಲಂ 120b 420, 379, 411, 427
* 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(2) 13(1)ಡಿ
* 112 ಕಬ್ಬಿಣ ಅದಿರುಗಳ ಸ್ಯಾಂಪಲ್ ಸಂಗ್ರಹ ಪರಿಶೀಲನೆ
* 1530 ದಾಖಲೆಗಳ ಸಂಗ್ರಹ
* 85 ಸಾಕ್ಷಿಗಳ ವಿಚಾರಣೆ
* 1926ರ ಭಾರತೀಯ ಅರಣ್ಯ ಕಾಯ್ದೆ ಸೆಕ್ಷನ್ 26 ಉಲ್ಲಂಘನೆ
* ಅದಿರು ಕಾಯ್ದೆ ಕಲಂ 4(1), 23

ಬಳ್ಳಾರಿಯಿಂದ ಜನಾರ್ದನ ರೆಡ್ಡಿ ಅವರನ್ನು ಕರೆದುಕೊಂಡು ಹೊರಟ ಸಿಬಿಐ ತಂಡ ಹೊರಟ ಕರ್ನೂಲು, ಗುಂತಕಲ್ ಮಾರ್ಗವಾಗಿ 12.40 ಗಂಟೆ ಸುಮಾರುಗೆ ಶಂಷಾಬಾದ್ ತಲುಪಿದ್ದಾರೆ.

ಹೈದರಾಬಾದ್ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಜನಾರ್ದನ ರೆಡ್ಡಿ ಅವರ ವಿರುದ್ಧದ ಪ್ರಕರಣದ ವಿಚಾರಣೆ ಮಧ್ನಾಹ್ನ ನಡೆಯಲಿದೆ. 3 ಗಂಟೆ ನಂತರ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ್ ಅವರನ್ನು ಸಿಬಿಐ ತಂಡ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.

English summary
Janardhan Reddy and OMC MD BV Srinivas has been chargesheeted under Prevention of Corruption Act, Forest and Mineral act and many IPC section and will be produced before the CBI special court in Hyderabad and Duo are also accused in fraud case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X