ಕರ್ನಾಟಕದ ನಿಜವಾದ ಮುಖ್ಯಮಂತ್ರಿ ಯಾರು?

Yeddyurappa and Sadananda Gowda
ಬೆಂಗಳೂರು, ಸೆ. 3 : ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ ಹಗರಣಗಳಲ್ಲಿ ಸಿಲುಕಿದ ಬಿಎಸ್ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಡಿವಿ ಸದಾನಂದ ಗೌಡರು ಅಧಿಕಾರದ ಚುಕ್ಕಾಣಿ ಹಿಡಿದುಕೊಂಡಂದಿನಿಂದ ಈ ಪ್ರಶ್ನೆ ವಿರೋಧ ಪಕ್ಷಗಳನ್ನು ಮಾತ್ರವಲ್ಲ ಸಾಮಾನ್ಯ ಜನರನ್ನೂ ಕಾಡುತ್ತಿದೆ.

ಒಂದು ಕಡೆ ಯಡಿಯೂರಪ್ಪನವರೇ ನಮ್ಮ ನಾಯಕರು, ಅವರೇ ಚುನಾವಣೆಗಳಲ್ಲಿ ಮುಂದಾಳತ್ವ ವಹಿಸಬೇಕು ಎಂದು ಚಂದ್ರೇಗೌಡರಂಥವರು ಹೇಳುತ್ತಿದ್ದರೆ, ನನ್ನ ಅಧಿಕಾರಾವಧಿ ಇನ್ನೆಷ್ಟು ದಿನ ಎಂದು ಸ್ವತಃ ಸದಾನಂದ ಗೌಡರೇ ಹೇಳಿ ನಾನಾ ಊಹಾಪೋಹಗಳಿಗೆ ಟಾನಿಕ್ ಒದಗಿಸಿದ್ದಾರೆ.

ಯಡಿಯೂರಪ್ಪನವರು ಇಂದು ಕೂಡ ಕಾರಿನಲ್ಲಿ ಸಾಗುತ್ತಿದ್ದರೆ ಮುಖ್ಯಮಂತ್ರಿಗಳಿಗೆ ಇರುವ ಮೂರು ವಾಹನಗಳ ಬೆಂಗಾವಲು ಪಡೆ ಅವರ ಹಿಂದೆ ಸಾಗುತ್ತಿರುತ್ತದೆ. ಅಧಿಕಾರ ಕಳೆದುಕೊಂಡಿದ್ದರೂ ಯಡಿಯೂರಪ್ಪನವರು ಪ್ರಭಾವವನ್ನು ಇನ್ನೂ ಸಾಕಷ್ಟು ಉಳಿಸಿಕೊಂಡಿದ್ದಾರೆ.

ಸದ್ಯಕ್ಕೆ ಅಧಿಕಾರದಲ್ಲಿ ಇಲ್ಲದಿದ್ದರೇನಂತೆ ಅವರೇ ಹೇಳಿದಂತೆ 'ಸಿಕ್ಸ್ ಮಂತ್ಸಲ್ಲಿ ಮತ್ತೆ ಬರ್ತೀನ್ರಿ' (ಒಂದು ತಿಂಗಳು ಆಗಲೆ ಕಳೆದಿದೆ) ಎಂದು ಯಡಿಯೂರಪ್ಪ ಹೇಳಿದ್ದಕ್ಕೆ ಪುರಾವೆ ಎಂಬಂತೆ ಅವರು ಪ್ರಾರಂಭಿಸಿದ್ದ ಯೋಜನೆಗಳ ಹೋರ್ಡಿಂಗುಗಳಲ್ಲಿ ಅವರೇ ಇನ್ನೂ ರಾರಾಜಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರವಲ್ಲ ಯಾದಗಿರಿಯ ಕೃಷಿ ಮಾರುಕಟ್ಟೆಯಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿ ಎಂಬ ಹೋರ್ಡಿಂಗ್ ಸಾರ್ವಜನಿಕರ ಕಣ್ಣಿಗೆ ದಿನವೂ ಬೀಳುತ್ತಿದೆ. ಜಿಲ್ಲಾಡಳಿತ ಕೂಡ ಇದ್ದರೆ ಇರಲಿ ಬಿಡಿ, ಮುಂದೆ ನೋಡಿಕೊಳ್ಳೋಣ ಎಂಬ ಧೋರಣೆ ತಾಳಿದ್ದಾರೆ. ಆದರೆ, ಕಿರಿಕಿರಿ ಆಗುತ್ತಿರುವುದು ಮಾತ್ರ ಮತ ಹಾಕಿದ ಮತದಾರರಿಗೆ ಮಾತ್ರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+