ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖುದ್ದು ಹಾಜರಾತಿಯಿಂದ ಎಚ್ಡಿಕೆ ದಂಪತಿಗೆ ವಿನಾಯತಿ

By Mahesh
|
Google Oneindia Kannada News

HD Kumaraswamy and anita skips court
ಬೆಂಗಳೂರು, ಆ.30: ಜಂತಕಲ್ ಮೈನಿಂಗ್ ಲೀಸ್ ಹಾಗೂ ವಿಶ್ವಭಾರತಿ ನಿವೇಶನ ಹಂಚಿಕೆ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ಕೋರ್ಟ್ ಗೆ ಹಾಜರಾಗದೆ ಎಚ್ ಡಿ ಕುಮಾರಸ್ವಾಮಿ ದಂಪತಿಗಳು ತಪ್ಪಿಸಿಕೊಂಡಿದ್ದಾರೆ.

ಖುದ್ದು ಹಾಜರಿಗೆ ವಿನಾಯತಿ ಕೋರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಅವರ ಪರ ವಕೀಲ ಹಶ್ಮತ್ ಪಾಶಾ ಅವರು ಅರ್ಜಿ ಸಲ್ಲಿಸಿದ್ದರು. ಕುಮಾರಸ್ವಾಮಿ ಅವರು ಹಾರ್ಟ್ ಪೇಶೆಂಟ್, ಅಧಿಕ ರಕ್ತದೊತ್ತಡ ಹಾಗೂ ಅನಿತಾ ಕುಮಾರಸ್ವಾಮಿ ಅವರಿಗೆ ತೀವ್ರ ಜ್ವರ, ಸಂಧಿವಾತ ಹಾಗೂ ಬೆನ್ನು ನೋವು ಕಾಡುತ್ತಿದೆ.

ಇಬ್ಬರು ಕಕ್ಷಿದಾರರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ವಿನಾಯತಿ ನೀಡಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ವಕೀಲರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಲೋಕಾಯುಕ್ತ ನ್ಯಾಯಾಧೀಶ ಸುಧೀಂದ್ರರಾವ್ ಅವರು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಜಂತಕಲ್ ಮೈನಿಂಗ್ ಎಂಡಿ ವಿನೋದ್ ಗೋಯಲ್ ಅವರಿಗೂ ಕೋರ್ಟ್ ವಿನಾಯತಿ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ.5ರಂದು ಮುಂದೂಡಿದ್ದಾರೆ.

ಎಲ್ಲವೂ ನಿರೀಕ್ಷಿತ : ಕೋರ್ಟ್ ಕಟಕಟೆ ಹತ್ತುವುದನ್ನು ತಪ್ಪಿಸಿಕೊಳ್ಳಲು ಯಡಿಯೂರಪ್ಪ ಅವರಂತೆ ಅನಾರೋಗ್ಯದ ನೆಪ ಹಿಡಿಯಬಹುದು ಎಂಬ ಶಂಕೆ ನಿಜವಾಗಿದೆ. ಕೋರ್ಟ್ ಬಂಧನದ ವಾರೆಂಟ್ ವಿಧಿಸುತ್ತದೆ. ಬಂಧನದ ಭೀತಿಗೆ ಒಳಗಾಗಿರುವ ದಂಪತಿಗಳು ಹೆಚ್ಚುಕಮ್ಮಿ ಇವತ್ತು ಕಟಕಟೆಯಲ್ಲಿ ನಿಲ್ಲುವುದು ಗ್ಯಾರಂಟಿ ಎನ್ನಲಾಗಿತ್ತು.

ಜಂತಕಲ್ ಮೈನಿಂಗ್ ಗುತ್ತಿಗೆ ಹಾಗೂ ವಿಶ್ವಭಾರತಿ ಹೌಸಿಂಗ್ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆ. 8 ರಂದು ಲೋಕಾಯುಕ್ತ ವಿಶೇಷ ನ್ಯಾಯಲಯದಿಂದ ಎಚ್ಡಿಕೆ ದಂಪತಿಗೆ ಸಮನ್ಸ್ ಜಾರಿ ಮಾಡಿತ್ತು.

ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಹಾಗೂ ತಡೆಯಾಜ್ಞೆ ನೀಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದ ದಂಪತಿಗೆ ನಿರಾಶೆ ಕಾದಿತ್ತು. ಆದ್ರೆ, ಈಗ ಗೌರಿ ಗಣೇಶ ಹಬ್ಬ ಮುಗಿಯುವ ತನಕ ಕೋರ್ಟ್ ಕಟ್ಲೆಯಿಂದ ದಂಪತಿಗಳು ದೂರಾಗಿ ಹಬ್ಬ ಆಚರಿಸಬಹುದಾಗಿದೆ.

English summary
Lokayukta Special court has accepted the plea made by former CM Kumaraswamy and Anitha's lawyer seeking concession in not attending court proceeding. Kumaraswamy and Anita Kumaraswamy were escaped from attending court at the last moment today(Aug.30).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X