ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಿಗೆ ತಪ್ಪಿದ ಸಿಎಂ, ಐಎಎಸ್ ಅಧಿಕಾರಿಗಳ ವರ್ಗ ಶುರು

By Mahesh
|
Google Oneindia Kannada News

CM Sadananda Gowda
ಬೆಂಗಳೂರು, ಆ.30: ಇನ್ನು ಒಂದು ವರ್ಷಗಳ ಕಾಲ ಯಾವುದೇ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವರ್ಗಾ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಮಾತಿಗೆ ತಪ್ಪಿದ್ದಾರೆ. ಮತ್ತೆ 15 ಮಂದಿ ಅಧಿಕಾರಿಗಳಿಗೆ ವರ್ಗಾವಣೆ ಆದೇಶ ನೀಡಲಾಗಿದೆ.

15 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಜೊತೆಗೆ 7 ಮಂದಿ ಐಎಎಸ್ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ವಿಪರೀತ ವರ್ಗಾವಣೆಯಿಂದ ಆಡಳಿತ ತಂತ್ರ ಚುರುಕುಗೊಳ್ಳುವ ಬದಲು ಕುಸಿಯುತ್ತದೆ ಎಂಬ ಅರಿವು ಇನ್ನೂ ಸರ್ಕಾರಕ್ಕೆ ಬಂದಿಲ್ಲ.

ವರ್ಗಾವಣೆಯಿಂದ ಅಧಿಕಾರಿಗಳಷ್ಟೇ ಅಲ್ಲ ಜನ ಸಾಮಾನ್ಯರಿಗೂ ಕಷ್ಟವಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಯಾವುದಕ್ಕೂ ಅಧಿಕಾರಗಳ ಪಟ್ಟಿ ನೋಟ್ ಮಾಡಿಟ್ಟುಕೊಳ್ಳಿ, 'ಶಾಸಕ/ಸಚಿವರು ಕೊಟ್ಟರೂ ಅಧಿಕಾರಿ ಕೊಡ' ಎಂಬ ಅಲಿಖಿತ ಗಾದೆ ಇರುವುದರಿಂದ ಅಧಿಕಾರಿಗಳೇ ಜನರೇ ಮುಖ್ಯ.

* ರಾಜೀವ್ ಚಾವ್ಲಾ, ಕಾರ್ಯದರ್ಶಿ ಕಂದಾಯ ಇಲಾಖೆ (ಭೂಮಿ ಹಾಗೂ ನಗರ ಆಸ್ತಿ ನೋಂದಣಿ)
* ರಮೇಶ್ ಬಿ. ಝಳಕಿ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
* ಬಸವರಾಜು ಕಾರ್ಯದರ್ಶಿ-ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ
* ಪಿ.ಎನ್.ಶ್ರೀ ನಿವಾಸಾಚಾರಿ- ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ (ಸಣ್ಣ ನಿರಾವರಿ) ಹಾಗೂ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಹೆಚ್ಚುವರಿ ಹೊಣೆಗಾರಿಕೆ.
* ಡಾ.ಶಾಲಿನಿ ರಜನೀಶ್-ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ
* ಕಪಿಲ್ ಮೋಹನ್-ವ್ಯವಸ್ಥಾಪಕ ನಿರ್ದೇಶಕರ, ಕೆಬಿಜೆಎನ್‌ಎಲ್, ಬೆಂಗಳೂರು
* ಜಿ.ವಿ. ಕೊಂಗವಾಡ್-ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ, ಜವಳಿ ಮತ್ತು ಎಸ್‌ಎಸ್‌ಐ)
* ಕೆ.ಎಸ್. ಪ್ರಭಾಕರ್-ವ್ಯವಸ್ಥಾಪಕ ನಿರ್ದೇಶಕರು, ಎಂಎಸ್‌ಐಎಲ್, ಬೆಂಗಳೂರು
* ತುಷಾರ್ ಗಿರಿನಾಥ್- ರಾಜ್ಯ ಯೋಜನಾ ನಿರ್ದೇಶಕರು, ಸರ್ವಶಿಕ್ಷಣ ಅಭಿಯಾನ.
* ಎಂ.ಎಸ್.ರವಿಶಂಕರ್-ಪೌರಾಡಳಿತ ಆಯುಕ್ತರು, ಬೆಂಗಳೂರು.
* ಬಿ.ಎಸ್. ರಾಮ ಪ್ರಸಾದ್-ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು
* ಎಂ.ಇ.ಶಿವಲಿಂಗಮೂರ್ತಿ-ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಪಾನೀಯ ಮಂಡಳಿ, ಬೆಂಗಳೂರು,
* ಡಾ.ವಿ.ಚಂದ್ರಶೇಖರ್-ವ್ಯವಸ್ಥಾಪಕ ನಿರ್ದೇಶಕರು, ರಾಜೀವ್‌ಗಾಂಧಿ ಗ್ರಾಮೀಣ ಗೃಹ ಮಂಡಳಿ, ಬೆಂಗಳೂರು.
* ಅನ್ವರ್ ಪಾಷಾ- ನಿರ್ದೇಶಕರು, ಸ್ವಯಂ ಉದ್ಯೋಗ ಯೋಜನೆ (ಎಸ್‌ಇಪಿ).
* ಸಲ್ಮಾ ಕೆ.ಫಹೀಮ್- ಯೋಜನಾ ನಿರ್ದೇಶಕರು, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಬೆಂಗಳೂರು.

ಹೊಸ ನೇಮಕಾತಿಗಳು:
* ಬಗಡಿ ಗೌತಮ್-ಸಹಾಯಕ ಆಯುಕ್ತರು, ಶಿರಸಿ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ.
* ಪಲ್ಲವಿ ಆಕೃತಿ-ಸಹಾಯಕ ಆಯುಕ್ತರು, ಸಕಲೇಶಪುರ ಉಪ ವಿಭಾಗ, ಹಾಸನ.
* ಪ್ರಿಯಾಂಕಾ ಮೇರಿ ಫ್ರಾನ್ಸಿಸ್-ಸಹಾಯಕ ಆಯುಕ್ತರು, ಚಿಕ್ಕೋಡಿ ಉಪವಿಭಾಗ, ಬೆಳಗಾವಿ.
* ಡಿ.ಕೆ.ರವಿ-ಸಹಾಯಕ ಆಯುಕ್ತರು, ಸೇಡಂ ಉಪ ವಿಭಾಗ, ಗುಲ್ಬರ್ಗಾ.
* ರೋಹಿಣಿ ಸಿಂಧೂರಿ ದಾಸರಿ-ಸಹಾಯಕ ಆಯುಕ್ತರು, ತುಮಕೂರು ಉಪವಿಭಾಗ, ತುಮಕೂರು.
* ಎಸ್.ಶಶಿಕಾಂತ್ ಸೆಂಥಿಲ್-ಸಹಾಯಕ ಆಯುಕ್ತರು, ಬಳ್ಳಾರಿ ಉಪ ವಿಭಾಗ, ಬಳ್ಳಾರಿ.
* ಡಾ.ಎಂ.ವಿ.ವೆಂಕಟೇಶ್-ಸಹಾಯಕ ಆಯುಕ್ತರು, ಮಂಗಳೂರು ಉಪ ವಿಭಾಗ, ದಕ್ಷಿಣ ಕನ್ನಡ ಜಿಲ್ಲೆ.

English summary
CM DV Sadananda Gowda has broke his own promise about IAS, IPS officers. Earlier Opposing frequent transfers of IAS and IPS officers, CM DVS said no transfers for one year, but last day 15 IAS officers have been transferred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X