ಯಡಿಯೂರಪ್ಪ ಜೊತೆ ಉಪ್ಪು ತಿಂದವರ ಪಟ್ಟಿ

De notification case accused list
ಬೆಂಗಳೂರು, ಆ.29: ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡನೇ ಖಾಸಗಿ ದೂರಿನ ಮೊದಲ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಎಂಟ್ರಿ ಕೊಟ್ರೆ ಇತಿಹಾಸ ನಿರ್ಮಾಣ ಗ್ಯಾರಂಟಿ.

ಏನು ಆರೋಪ? : ಬೆಂಗಳೂರಿನ ಅರಕೆರೆ, ದೇವರಚಿಕ್ಕನಹಳ್ಳಿ ಮತ್ತು ಗೆದ್ದಲಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಡಿನೋಟಿಫಿಕೇಷನ್ಗೆ ಸಂಬಂಧಿಸಿದ ಪ್ರಕರಣ.

ಇತರೆ ಆರೋಪಿಗಳು: ಬಿಎಸ್ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಇತರೆ 14 ಆರೋಪಿಗಳು ಇಂತಿದ್ದಾರೆ:

* ಶಿವಮೊಗ್ಗ ತಾಲ್ಲೂಕಿನ ಕುಂಸಿ ಹೋಬಳಿಯ ಎನ್.ಅಕ್ಕಮಹಾದೇವಿ,
* ಹೊನ್ನಾಳಿ ಪಟ್ಟಣದ ಎನ್.ಎಸ್.ಮಹಾಬಲೇಶ್ವರ,
* ಬೆಂಗಳೂರಿನ ಬಿಟಿಎಂ ಬಡಾವಣೆಯ ಸತ್ಯಕುಮಾರಿ,
* ದೊಮ್ಮಲೂರಿನ ಮೋಹನ್ ರಾಜ್,
* ಜೆ.ಪಿ.ನಗರ ಮೂರನೇ ಹಂತದ ವಿ.ಪ್ರಕಾಶ್,
* ದೇವರಚಿಕ್ಕನಹಳ್ಳಿಯ ಕಾಮಾಕ್ಷಮ್ಮ, * ಕುಂಸಿಯ ಎಂ.ಮಂಜುನಾಥ್,
* ಬೆಂಗಳೂರು ಜಯನಗರ 4ನೇ 'ಟಿ' ಬ್ಲಾಕ್‌ನ ವಿ.ಅನಿಲ್‌ಕುಮಾರ್,
* ಬನಶಂಕರಿ ಎರಡನೇ ಹಂತದ ಬಿ.ರಮೇಶ್, * ಗೆದ್ದಲಹಳ್ಳಿಯ ಶಾಂತಾ ದೇವಿ,
* ಫ್ರೇಜರ್ ಟೌನ್‌ನ ಶಾಂತಾ ಬಾಯಿ,
* ನ್ಯೂ ಬಂಬೂ ಬಜಾರ್‌ನ ಇಸ್ಮಾಯಿಲ್ ಷರೀಫ್,
* ಜಯನಗರ 4ನೇ 'ಟಿ' ಬ್ಲಾಕ್‌ನ ವಿ.ಮಂಜುನಾಥ್
* ಪುಟ್ಟೇನಹಳ್ಳಿಯ ಕೆ.ಶಿವಪ್ಪ

ವಕೀಲರು : ಯಡಿಯೂರಪ್ಪ ಪರ ವಕೀಲ ರವಿ ಬಿ.ನಾಯ್ಕ, ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ. ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್.
ಸ್ಥಳ: ಬೆಂಗಳೂರಿನ ಸಿವಿಲ್ ಕೋರ್ಟ್ ಕಟ್ಟಡ, ಲೋಕಾಯುಕ್ತ ವಿಶೇಷ ನ್ಯಾಯಾಲಯ.
ಸಮಯ : ಮಧ್ಯಾಹ್ನ 3 ರ ನಂತರ ತೀರ್ಪು ಏನಾಗಲಿದೆ. ಯಡಿಯೂರಪ್ಪಗೆ ಬಂಧನವೋ, ಜಾಮಿನೋ ಅಥವಾ ವಿಚಾರಣೆ ಮುಂದೂಡಲೋಗುವುದೋ, ಕಾದು ನೋಡಿ..

ಪೊಲೀಸ್ ಬಂದೋಬಸ್ತ್ : ಕೇಂದ್ರ ಡಿಸಿಪಿ ರಮೇಶ್ ನೇತೃತ್ವದಲ್ಲಿ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಯಡಿಯೂರಪ್ಪ ಬಂಧನವಾದರೆ ಉಂಟಾಗಬಹುದಾದ ಗಲಭೆ, ಘರ್ಷಣೆ ನಿಯಂತ್ರಿಸಲು ಕೋರ್ಟ್ ಆವರಣದಿಂದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+