'ಎಲಾ ಮಗನೇ, ನಾಡಿನ ಸತ್ಪ್ರಜೆಯ ಬಗ್ಗೆ ಹಗುರವಾಗಿ ಮಾತನಾಡಿದೆಯಾ'

ಸುವರ್ಣ ನ್ಯೂಸ್ ಚಾನೆಲಿಗೆ ನೀಡಿರುವ ಸಂದರ್ಶನದಲ್ಲಿ ಕುಮಾರಸ್ವಾಮಿಗಳು, ಯಾವುದೇ ಎಗ್ಗುಸಿಗ್ಗು ಇಲ್ಲದೆ ಸಂತೋಷ್ ಹೆಗ್ಡೆ ಅವರ ವೈಯಕ್ತಿಕ ಜೀವನವನ್ನು ಕೆಣಕಿದ್ದಾರೆ. ಅಲ್ಲ, ಏನಾಗಿದೆ ಈ ಕುಮಾರಣ್ಣನಿಗೆ?
'ಎಲಾ ಮಗನೇ, ಭ್ರಷ್ಟಾಚಾರದ ವಿರುದ್ಧ ಆ ಪಾಟಿ ಹೋರಾಡುತ್ತಿರುವ ನಾಡಿನ ಸತ್ಪ್ರಜೆಯ ಬಗ್ಗೆ ಹೀಗೆಲ್ಲ ಹಗುರವಾಗಿ ಮಾತನಾಡಿದೆಯಾ, ಛೆ!' ಎಂದು ದೊಡ್ಡ ಗೌಡರು ಮಗನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋಗಿಹೋಗಿ ಸಾಧು ಸ್ವಭಾವದ ಹೆಗ್ಡೆ ಅವರನ್ನು, ಅದೂ ಅವರ ಜೀವನದ ಸಂಧ್ಯಾಕಾಲದಲ್ಲಿ 'ನಿಮ್ಮ ರಾತ್ರಿ ಖರ್ಚು ಎಷ್ಟು? ನಿಮಗೆ ಬರುವ ಸಂಬಳದಲ್ಲಿ ರಾತ್ರಿ ಚಟುವಟಿಕೆಗಳನ್ನು ಹೇಗೆ ನಿಭಾಯಿಸುತ್ತಿದ್ದೀರೀ?' ಎಂದೆಲ್ಲ ಕೇಳಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಇರಬೇಕಾದ ಘನತೆಯೇ ಇದು ಜನ ಎಕ್ಕಮಕ್ಕ ಬೈದಾಡುತ್ತಿದ್ದಾರೆ.
ಇದಕ್ಕೆ ಸರಿಯಾಗಿ ಝಾಡಿಸಿರುವ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರು 'ನನಗೆ 42ವರ್ಷಗಳಿಂದ ಒಬ್ಬಳೇ ಹೆಂಡತಿ ಮತ್ತು ಒಂದೇ ಮನೆ; ಎರಡನೇ ಮನೆ ಮಾಡಿಲ್ಲ. ಹಾಗೂ ಫ್ರೀಡಂ ಪಾರ್ಕ್‌ನಿಂದ ನೇರವಾಗಿ ಮನೆಗೇ ಹೋಗುತ್ತೇನೆ. ಹಾಗಾಗಿ, ನನ್ನ ನಿಶಾಚರ ಕಾರ್ಯಗಳ ಬಗ್ಗೆ ನಿಮಗೆ ಕಾಳಜಿ ಬೇಡ. ತಮ್ಮ ನಡತೆ ಬದಲಾಯಿಸಿಕೊಳ್ಳಿ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಹೇಳದೆಯೇ ಅವರ ಕೆನ್ನೆಗೆ ಬಾರಿಸಿದ್ದಾರೆ.












Click it and Unblock the Notifications