ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಆಸ್ತಿ: ಜಗನ್‌ ಬಂಧನಕ್ಕೆ ಸಿಬಿಐ ಕ್ಷಣಗಣನೆ

By Srinath
|
Google Oneindia Kannada News

ys-jaganmohan-imminent-arrest-cbi
ಹೈದರಾಬಾದ್, ಆಗಸ್ಟ್ 26 : ಆಂಧ್ರ ಪ್ರದೇಶದ ಯುವ ರಾಜಕಾರಣಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ವೈ.ಎಸ್. ಜಗನ್‌ಮೋಹನ ರೆಡ್ಡಿ ಅವರ ಬಂಧನಕ್ಕೆ ಸಿಬಿಐ ಸಕಲ ಸಿದ್ಧತೆ ನಡೆಸಿದ್ದು, ಯಾವುದೇ ಕ್ಷಣ ಜಗನ್ ಬಂಧನವಾಗಲಿದೆ ಎಂದು ತಿಳಿದುಬಂದಿದೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸುಪ್ರೀಂಕೋರ್ಟ್ ಆಣತಿಯಂತೆ ಜಗನ್ ವಿರುದ್ಧ ತನಿಖೆ ಕೈಗೆತ್ತಿಗೊಂಡಿರುವ ಸಿಬಿಐ, ತನಿಖೆಗೆ ಸಹಕರಿಸದಿದ್ದರೆ ಅಥವಾ ಸಮನ್ಸ್ ಮೇರೆಗೆ ಹಾಜರಾಗದಿದ್ದರೆ ಅವರನ್ನು ಬಂಧಿಸಲು ನಮಗೆ ಯಾವುದೇ ಅಡ್ಡಿ ಇಲ್ಲ. ಮುಖ್ಯವಾಗಿ ಸಾಕ್ಷ್ಯ ನಾಶಕ್ಕೆ ಜಗನ್ ಕೈಹಾಕಿದ್ದಾರೆ ಎಂಬ ಸುಳಿವು ಸಿಕ್ಕಿದರೂ ಅವರು ಬಂಧನಕ್ಕೀಡಾಗುವುದು ಖಚಿತ ಎಂದು ಸಿಬಿಐ ಎಚ್ಚರಿಸಿದೆ.

ರೆಡ್ಡಿ ಆಸ್ತಿ ಪ್ರಮಾಣ 2002ರಲ್ಲಿ ಕೇವಲ 11 ಲಕ್ಷ ರುಪಾಯಿ ಇದ್ದಿದ್ದು 2009ರ ವೇಳೆಗೆ ಅವರಪ್ಪ ದುರಂತ ಸಾವನ್ನಪ್ಪುವ ವೇಳೆಗೆ 42 ಸಾವಿರ ಕೋಟಿ ರುಪಾಯಿ ಒಡೆಯರಾಗಿದ್ದರು. ಇದರ ಬಗ್ಗೆಯೂ ತನಿಖೆ ನಡೆಸುಂತೆ ಆಂಧ್ರ ಜವಳಿ ಸಚಿವ ಪಿ. ಸುಧಾಕರ ರಾವ್ ಆಗಸ್ಟ್ 10ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು.

ತನಿಖೆಗೆ ಕೋರ್ಟ್ ತಥಾಸ್ತು ಎಂದಿದ್ದೇ ತಡ, ಸಿಬಿಐಗೆ ಮತ್ತಷ್ಟು ಬಲ ಬಂದಿದೆ. ಜಗನ್ ವಿರುದ್ಧ ತನಿಖೆ ಚುರುಕುಗೊಳಿಸಿದ್ದು, ಕೈಕೋಳ ಸಿದ್ಧಪಡಿಸಿಟ್ಟುಕೊಂಡಿದೆ.

English summary
The CBI has speeded up its investigation into Reddy's (YS Jaganmohan Reddy) illegal disproportionate assets. The CBI also warned that if Jagan fails to turn up after being summoned, he might be arrested any time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X