Bengaluru: ಇಂದಿನಿಂದ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲುಗಳ ಟ್ರಯಲ್ ರನ್ ಶುರು

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಹುನಿರೀಕ್ಷಿತ ನಮ್ಮ ಮೆಟ್ರೋದ 'ಪಿಂಕ್ ಲೈನ್' ರೈಲುಗಳ ಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೊಸ ರೈಲು ಬೋಗಿಗಳಿಗೆ ಶಾಸನಬದ್ಧ ಅನುಮತಿಗಳನ್ನು ಪಡೆದುಕೊಳ್ಳಲು ಅತ್ಯಂತ ನಿರ್ಣಾಯಕ ಪ್ರಕ್ರಿಯೆಯಾಗಿರುವ ಆಸಿಲೇಶನ್ ಟ್ರಯಲ್ಸ್ (Oscillation trials) ಇಂದಿನಿಂದ (ಮಂಗಳವಾರ) ಪ್ರಾರಂಭವಾಗಲಿದೆ.

ಈ ಪ್ರಮುಖ ಪ್ರಾಯೋಗಿಕ ಸಂಚಾರದ ಹಿನ್ನೆಲೆಯಲ್ಲಿ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ತಂಡವು ವಾರಾಂತ್ಯದಲ್ಲಿಯೇ ಕೊತ್ತನೂರು ಡಿಪೋಗೆ ಆಗಮಿಸಿದ್ದು, ಪರಿಕರಗಳ ಅಳವಡಿಕೆ ಕಾರ್ಯವನ್ನು ಕೈಗೊಂಡಿದೆ. ಮಂಗಳವಾರದಿಂದ ಅಧಿಕೃತವಾಗಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (BMRCL) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Namma Metro

ಈ ತಿಂಗಳ ಆರಂಭದಲ್ಲಿ ರೈಲ್ವೆ ಮಂಡಳಿಯು ಆರ್‌ಡಿಎಸ್‌ಒ (RDSO) ಟ್ರಯಲ್ಸ್‌ಗೆ ಅಗತ್ಯವಾದ ಅನುಮತಿಗಳನ್ನು ನೀಡಿತ್ತು. ಈ ಪ್ರಾಯೋಗಿಕ ಪರೀಕ್ಷೆಯು ಕನಿಷ್ಠ 10 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಆಸಿಲೇಶನ್, ಬ್ರೇಕಿಂಗ್, ವೇಗ, ಹಾಗೂ ಟ್ರ್ಯಾಕ್ ಮತ್ತು ಸಿಸ್ಟಮ್ ಇಂಟಿಗ್ರೇಷನ್ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

Viral Photos: ಬೆಂಗಳೂರಿನಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತ ಮಕ್ಕಳ ಸವಾರಿ, ಪೋಷಕರನ್ನು ಜೈಲಿಗೆ ಹಾಕಲು ನೆಟ್ಟಿಗರ ಆಗ್ರಹ
Viral Photos: ಬೆಂಗಳೂರಿನಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಅಪ್ರಾಪ್ತ ಮಕ್ಕಳ ಸವಾರಿ, ಪೋಷಕರನ್ನು ಜೈಲಿಗೆ ಹಾಕಲು ನೆಟ್ಟಿಗರ ಆಗ್ರಹ

ಬಿಎಂಆರ್‌ಸಿಎಲ್ ಈ ಹಿಂದೆ ಪಿಂಕ್ ಲೈನ್‌ನ 7.5 ಕಿ.ಮೀ ಉದ್ದದ ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ವಿಸ್ತರಿತ ಮಾರ್ಗವನ್ನು ಮೇ ಅಂತ್ಯದ ವೇಳೆಗೆ ಸಾರ್ವಜನಿಕ ಮುಕ್ತಗೊಳಿಸುವ ಗುರಿ ಹೊಂದಿತ್ತು. ಆದರೆ ಪ್ರಸ್ತುತ ನಡೆಯುತ್ತಿರುವ ಪರೀಕ್ಷೆಗಳು ಹಾಗೂ ಅನುಮತಿ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳ ಕಾಲಾವಕಾಶ ಬೇಕಾಗುವ ಸಾಧ್ಯತೆಯಿದೆ. ಹೀಗಾಗಿ, ನಿಗದಿತ ಗಡುವಿನೊಳಗೆ ಅಂದರೆ ಮೇ ತಿಂಗಳ ಅಂತ್ಯಕ್ಕೆ ಈ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಗುವುದು ಬಹುತೇಕ ಅನುಮಾನವಾಗಿದೆ.

ನಮ್ಮ ಮೆಟ್ರೋದ ಈ ಹೊಸ ರೈಲು ಬೋಗಿಗಳನ್ನು ಬಿಇಎಂಎಲ್ (BEML) ಸಂಸ್ಥೆಯು ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ಥಳೀಯವಾಗಿ ತಯಾರಿಸಿದೆ. ಇದುವರೆಗೆ ಸಂಸ್ಥೆಯು ತಲಾ ಆರು ಬೋಗಿಗಳಿರುವ ಐದು ರೈಲು ಸೆಟ್‌ಗಳನ್ನು ಬಿಎಂಆರ್‌ಸಿಎಲ್‌ಗೆ ಯಶಸ್ವಿಯಾಗಿ ಹಸ್ತಾಂತರಿಸಿದೆ. ಬಿಇಎಂಎಲ್ ತನ್ನ ಮೊದಲ ರೈಲನ್ನು ಕಳೆದ ಡಿಸೆಂಬರ್‌ನಲ್ಲಿ ಪೂರೈಕೆ ಮಾಡಿತ್ತು. ಆದರೆ ವಿನ್ಯಾಸ ಅನುಮೋದನೆಗಳಿಗೆ ಸಂಬಂಧಿಸಿದ ಕೆಲವು ತಾಂತ್ರಿಕ ವಿಚಾರಗಳ ಕುರಿತು ರೈಲ್ವೆ ಮಂಡಳಿಯು ಪ್ರಶ್ನೆಗಳನ್ನು ಎತ್ತಿದ್ದ ಕಾರಣ ಆರ್‌ಡಿಎಸ್‌ಒ ಪ್ರಾಯೋಗಿಕ ಪರೀಕ್ಷೆಗಳು ತಡವಾಗಿದ್ದವು ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಇದೀಗ ನಡೆಯುತ್ತಿರುವ ಪ್ರಾಯೋಗಿಕ ಸಂಚಾರವು ಯಶಸ್ವಿಯಾದ ನಂತರ, ಆರ್‌ಡಿಎಸ್‌ಒ ಒಂದು ವರದಿ ಹಾಗೂ 'ವೇಗ ಪ್ರಮಾಣಪತ್ರ'ವನ್ನು (Speed certificate) ನೀಡಲಿದೆ. ಬಳಿಕ ಬಿಎಂಆರ್ ಸಿಎಲ್ ಇದನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ (CMRS) ಸಲ್ಲಿಸಿ ರೋಲಿಂಗ್ ಸ್ಟಾಕ್ ತಪಾಸಣೆ ಮಾಡಿಸಲಿದೆ. ಜೊತೆಗೆ ರೈಲ್ವೆ ಸಚಿವಾಲಯದಿಂದ ಅಂತಿಮ ಒಪ್ಪಿಗೆಯನ್ನೂ ಪಡೆಯಬೇಕಾಗುತ್ತದೆ.

"ಮಹಿಳೆಯರನ್ನು ಎಲ್ಲೂ ನೆಮ್ಮದಿಯಾಗಿ ಇರಲು ಬಿಡಲ್ವಾ?": 'ಬೆಂಗಳೂರು ಮೆಟ್ರೋ ಚಿಕ್ಸ್' ಅಡ್ಮಿನ್‌ಗೆ ಹೈಕೋರ್ಟ್ ಛೀಮಾರಿ, ಅರ್ಜಿ ವಜಾ

ಆ ನಂತರವಷ್ಟೇ ಆರ್‌ಡಿಎಸ್‌ಒ ಅಂತಿಮ ವೇಗ ಪ್ರಮಾಣಪತ್ರವನ್ನು ನೀಡುತ್ತದೆ. ಇದಲ್ಲದೆ, ಪ್ರಯಾಣಿಕರ ಸುರಕ್ಷಿತ ಕಾರ್ಯಾಚರಣೆಗಾಗಿ ಮಾರ್ಗದ ತಪಾಸಣೆ ನಡೆಸಲು ಬಿಎಂಆರ್‌ಸಿಎಲ್ ಈ ಪ್ರಮಾಣಪತ್ರವನ್ನು ಸಿಎಂಆರ್‌ಎಸ್‌ಗೆ ಕೊಂಡೊಯ್ಯಲಿದೆ. ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗಳಿಗಾಗಿ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ISA) ಪ್ರಮಾಣೀಕರಣವೂ ತುಂಬ ಮುಖ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+