ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶದಾಗೆ ಹಾರುತ್ತಿದ್ದ ರೆಡ್ಡಿಗಳು ಈಗ ನೆಲ ಕಂಡರು

By Mahesh
|
Google Oneindia Kannada News

ಎಲ್ಲಾ ಚೆನ್ನಾಗಿದ್ದ ದಿನಗಳಲ್ಲಿ ನೋಡ್ಬೇಕಿತ್ತು ಅವರ ವೈಭೋಗವಾ ಬಳ್ಳಾರಿ, ಬೆಂಗಳೂರು ನಡುವೆ ಕೆಲ ನಿಮಿಷಗಳ ಅಂತರದ ಹಾರಾಟವೇನು, ಓಡಾಟವೇನು ಚಿರಾಟವೇನು ಆ ತ್ರಿಮೂರ್ತಿಗಳ ಜೋಡಿ ಜೊತೆಗೆ ಅಂಗ ರಾಜ್ಯಾಧಿತನ ಸ್ಟೈಲ್ ಕಂಡು ಇಡೀ ಜಿಲ್ಲೆಯೇನು ದೇಶವೇ ಅವರತ್ತ ಹಿಂತಿರುಗಿ ನೋಡಿತ್ತು.

ಆದರೆ, ಈಗ ರಾಜ್ಯದ ಗಡಿ ಭಾಗದ ಮಣ್ಣು ಹೆಕ್ಕುತ್ತಾ ಹೆಕ್ಕುತ್ತಾ ಭದ್ರವಾತಿ ಗೋಲ್ಡ್ ಅನ್ನು ಅಕ್ಷರಶಃ ಚಿನ್ನ ಮಾಡುವ ರಸವಿದ್ಯೆ ಕಲಿತ ತ್ರಿಮೂರ್ತಿಗಳಿಗೆ ರಾಜಕೀಯ ರುಚಿ ತೋರಿಸಿದವನೇ ಅಂಗರಾಜ್ಯಾಧಿತ.

ರಿಪಬ್ಲಿಕ್ ಆಫ್ ಬಳ್ಳಾರಿಯ ದೊರೆಗಳಾದ ರೆಡ್ಡಿ ಸೋದರರು ಹಾಗೂ ಶ್ರೀರಾಮುಲು ಇಂದು ಮಂಕಾಗಿದ್ದಾರೆ. ಕೈಲಿ ಅಧಿಕಾರವಿಲ್ಲ, ಕೈಗೆ ಹತ್ತಿದ್ದ ಕಸುಬಿಗೆ ಕತ್ತರಿ ಬಿದ್ದಿದೆ, ಬಂಡಾಯ, ಭಿನ್ನಮತದ ಚದುರಂಗದಾಟ ಆಡಲು ಕೂತರೆ ಶಾಸಕರೆಂಬ ಆಟದ ಪಾನ್ ಗಳೇ ನಾಪತ್ತೆ.

ಸದಾ ಹೆಲಿ ಕಾಪ್ಟರ್ ನಲ್ಲಿ ಸುತ್ತುತ್ತಿದ್ದ ಧಣಿಗಳು ಹೈ ಎಂಡ್ ಮರ್ಸಿಡೀಸ್ ಬೆಂಜ್ ನಿಂದ ಇತ್ತೀಚಿನ ರೇಂಜ್ ರೋವರ್ ಗೆ ಶರಣಾಗಿದ್ದಾರೆ. ಬಳ್ಳಾರಿ ಗಣಿಧಣಿಗಳ ಹೆಲಿ ವ್ಯಾಮೋಹದ ಕಥೆ ವ್ಯಥೆ ಇಲ್ಲಿದೆ. . .

ಆಕಾಶದಲ್ಲಿ ಉಕ್ಕಿನ ಹಕ್ಕಿ ಮಾಯ: ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ಅವರ ಅಂಕಿ ಅಂಶದ ಪ್ರಕಾರ ಕಳೆದ ವರ್ಷ ರೆಡ್ಡಿಗಳ ಹಾರಾಟ ಶೇ.90 ರಷ್ಟು ಕಮ್ಮಿಯಾಗಿದೆಯಂತೆ. ATC ಅನುಮತಿಯಿಲ್ಲದೆ ಗುಪ್ತವಾಗಿ ಹಾರಾಟ ನಡೆಸುವುದು ಸಾಧ್ಯವಿಲ್ಲದ ಮಾತು. ಆದ್ದರಿಂದ ಎಟಿಸಿ ಮಾತಿನ ಪ್ರಕಾರ ನೋಡಿದರೆ ರೆಡ್ಡಿಗಳ ಬೆನ್ನ ಮೇಲೆ ವರ್ಷದ ಹಿಂದೆಯೇ ಹತ್ತಿ ಕುಳಿತಿರುವಂತಿದೆ.

ಬಳ್ಳಾರಿ/ಸಂಡೂರಿನ ಮೂಲ ಗಣಿಧಣಿಗಳಾದ ಲಾಡ್ ಕುಟುಂಬದ ವಿಷಯಕ್ಕೆ ಬಂದರೆ ಏಕನಾಥ್, ಅನಿಲ್ ಹಾಗೂ ಸಂತೋಷ್ ಲಾಡ್ ಅವರ ಬಳಿಯೂ ಸುಸಜ್ಜಿತ ಹೆಲಿಕಾಪ್ಟರ್ ಗಳಿವೆ. ಹೆಲಿಕಾಪ್ಟರ್ ಹಾಗೂ ಚಾರ್ಟೆರೆಡ್ ಫ್ಲೈಟ್ಸ್ ಬಳಕೆ ಸಾಮಾನ್ಯ. 2008 ರಿಂದ 201೦ರವರೆಗಿನ ಲೆಕ್ಕಾಚಾರ ಹಾಕಿದರೆ ತಿಂಗಳಿಗೆ ಅಬ್ಬಬ್ಬಾ ಎಂದರೆ 50 ರಿಂದ 75 ಗಂಟೆ ತಿರುಗಾಟ ನಡೆಸಿದ್ದಾರೆ. ಅದೂ ದೂರ ಪ್ರಯಾಣ ಇದ್ದಾಗ ಮಾತ್ರ. 2011 ರಲ್ಲಿ ತಿಂಗಳಿಗೆ 10 ಗಂಟೆಗಿಂತ ಹೆಚ್ಚು ಕಾಲ ಹೆಲಿಕಾಪ್ಟರ್ ನಲ್ಲಿ ಸುತ್ತಿದ್ದಿಲ್ಲ.

ಲಾಡ್ ಗೆ ಇಲ್ಲದ ಹುಚ್ಚು ರೆಡ್ಡಿಗೇಕೆ?: ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರು ಸ್ವತಃ ಏರ್ ಕಾರ್ಗೋ ಕಂಪನಿ ಮಾಲೀಕರಾಗಿದ್ದಾರೆ. ಬೆಲ್ ಚಾಪ ಹೊಂದಿದ್ದಾರೆ ಕೂಡಾ ಆದರೆ, ಅಕಾಶ ಮಾರ್ಗಕ್ಕಿಂತ ಭೂ ಮಾರ್ಗವನ್ನೇ ನೆಚ್ಚಿಕೊಂಡಿದ್ದಾರೆ. ಇನ್ನೂ ರೆಡ್ಡಿಗಳ ಆಪ್ತ ಆಗರ್ಭ ಶ್ರೀಮಂತ ಶಾಸಕ ಆನಂದ್ ಸಿಂಗ್ ಬಳಿ ಕೂಡಾ ಹೆಸರಿಗೆ ಅಂಥ ಒಂದು ಹೆಲಿಕಾಪ್ಟರ್ ಇದೆ. ಆದರೆ ಬಳಸಿದ್ದಂತೂ ಯಾರೂ ಕಂಡಿಲ್ಲ.

ಕರ್ನಾಟಕದ ಅದಿರಿನ ಮೇಲೆ ಚೀನಾದ ಕಣ್ಣು ಬಿದ್ದ ಮೇಲೆ ಗಣಿಧಣಿಗಳು, ರಾಜಕಾರಣಿಗಳಿಗೆ ಹೆಲಿಕಾಪ್ಟರ್ ಹಾರಾಟದ ಹುಚ್ಚು ಹೆಚ್ಚಾಯಿತು. ರೆಡ್ಡಿ ಸೋದರರಿಗೆ ತೀರಾ ಆಪ್ತರಾಗಿದ್ದ ಅಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಬಳಿ 14 ಸೀಟಿನ ಬೆಲ್ ಚಾಪರ್, ನೈಟ್ ವಿಷನ್ ಸೌಲಭ್ಯವಿದ್ದ 3 ಹೆಲಿಕಾಪ್ಟರ್ ಹಾಗೂ5 ಸೀಟರ್ ಬೆಲ್ ಚಾಪರ್ ಹೊಂದಿದ್ದರು. ಇದನ್ನು ನೋಡಿದ ಮೇಲೆ ಜನಾರ್ದನ ರೆಡ್ಡಿಗೆ ಹೆಲಿ ಕಾಪ್ಟರ್ ಒಡೆಯನಾಗಬೇಕು ಎಂಬ ಹುಕ್ಕಿ ಹುಟ್ಟಿಕೊಂಡು ಬಿಟ್ಟಿತು.

ನೆಚ್ಚಿನ ಹೆಲಿಕಾಪ್ಟರ್ 'ರುಕ್ಮಿಣಿ' ಮೂಲಕ ಬಳ್ಳಾರಿಗೆ ಸುಷ್ಮಾ ಸ್ವರಾಜ್ ಸೇರಿದಂತೆ ಇತ್ತೀಚಿಗೆ ಬಂದ ನಿತಿನ್ ಗಡ್ಕರಿ ಸೇರಿದಂತೆ ಹತ್ತು ಹಲವು ಗಣ್ಯರನ್ನು ಕರೆತರಲಾಗಿದೆ.
ಎರಡು ಬಾರಿ ಸರ್ಕಾರ ಅಧಿಕಾರಕ್ಕೆ ಬಂದು ಕುಸಿದಿದ್ದು, ಶಾಸಕರ ಬಂಡಾಯ, ಭಿನ್ನಮತ ಸೇರಿದಂತೆ ಅನೇಕ ಡೀಲ್ ಗಳು ಹೆಲಿ ಕಾಪ್ಟರ್ ಗಳು ನಡೆದುಹೋಗಿವೆ.

ಮೂಲಗಳ ಪ್ರಕಾರ, ಖಾಸಗಿ ಹೆಲಿಕಾಪ್ಟರ್ ನಲ್ಲಿ ಒಮ್ಮೆ ಬೆಂಗಳೂರಿನಿಂದ ಬಳ್ಳಾರಿಗೆ ಹೋಗಿ ಬಂದು ಮಾಡಿದರೆ ಕನಿಷ್ಠ 60,000 ರು ವೆಚ್ಚವಾಗುತ್ತದೆ. ಅದೇ ಬಾಡಿಗೆ ಪಡೆದ ಹೆಲಿಕಾಪ್ಟರ್ ರೇಟ್ ಪ್ರತಿ ಗಂಟೆಗೆ 50,000 ರು ತಗುಲುತ್ತದೆ.

ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ರೆಡ್ಡಿಗಳಂತೂ ನೆಲದ ಮೇಲೆ ಕಾಲಿಟ್ಟಿದ್ದೆ ಕಮ್ಮಿ. ಆಕಾಶದಲ್ಲಿ ಹಾರಾಡಿದ್ದೆ ಹೆಚ್ಚು. ಈಗಂತೂ ಮಣ್ಣಿನ ಮಕ್ಕಳಾಗಿ ಗಣಿಧೂಳನ್ನು ಸವರಿಕೊಂಡು ಸಂಚಾರ ಮಾಡಬೇಕಾದ ಕಷ್ಟದ ಪರಿಸ್ಥಿತಿಗೆ ಬಂದುಬಿಟ್ಟಿದ್ದಾರೆ. ಬೆನ್ನಿಗಂಟಿದ ಶನಿ ಯಾವಾಗ ಜಾರಿ ಬೀಳುವನೋ ಎಂದು ಜಪಿಸುತ್ತಿದ್ದಾರೆ.

English summary
With the Reddy brothers downfall heli-hop between Bellary and Bangalore has been almost stopped says ATS of Jindal Airport Authority. Bellary Mine Barons love for Helicopter astonished fellow mine owners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X