ಭದ್ರಾ ಅಕ್ರಮ: ಯಡ್ಡಿ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ಇಲ್ಲ
ಬೆಂಗಳೂರು,
ಆಗಸ್ಟ್ 26: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ರಾಜ್ಯದ ನ್ಯಾಯಾಲಯಗಳು ಒಂದರ ಮೇಲೊಂದರಂತೆ ಆಘಾತ ನೀಡುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. id="toptextpromo">'ಲೋಕಾಯುಕ್ತ
ನ್ಯಾಯಾಲಯ ಎಫ್ ಐಆರ್ ದಾಖಲಿಸಿರುವುದು ಕಾನೂನು ಸಮ್ಮತವಾಗಿದೆ. ತನಿಖೆಗೆ ತಡೆಯಾಜ್ಞೆ ನಿಡಲಾಗದು' ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಯಡಿಯೂರಪ್ಪ ಬಂಧನ ಕಾಲ ಸನ್ನಿಹಿತವಾಗುತ್ತಿದೆ ಎನ್ನಬಹುದು. id='are-slot-1' class='oiad oi-axt oiadv'> id='top-searched-articles'>'2004-05ರಲ್ಲಿ
ಕಾಮಗಾರಿ ಆರಂಭವಾದಾಗ 500 ಕೋಟಿ ರೂಪಾಯಿಗಳನ್ನು ಮೀಸಲು ಇಡಲಾಗಿತ್ತು. ಪ್ರಸ್ತುತ ಕಾಮಗಾರಿ ವೆಚ್ಚವನ್ನು 1020 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಕೋಟ್ಯಂತರ ರು ಲಂಚ ಪಡೆದಿದ್ದಾರೆ' ಎಂದು ಆರೋಪಿಸಿ ರಾಜ್ಯಸಭೆ ಸದಸ್ಯ, ಜೆಡಿ ಎಸ್ ನೇತಾರ ವೈ ಎಸ್ ವಿ ದತ್ತಾ ಲೋಕಾಯುಕ್ತಕ್ಕೆ ದೂರು ನೀಡಿದ್ದರು.











Click it and Unblock the Notifications