486 ಹಸುಗಳ ಗಬ್ಬ ಮಾಡಿದ ದಾಖಲೆ ವೀರ ಗೋಪಾಲ

Record Mating by Kutch Bull Gopal
ಅಹಮದಾಬಾದ್ ಆ.23: ಗುಜರಾತಿನ ಕಛ್ ಜಿಲ್ಲೆಯ 14 ವರ್ಷದ ಹೋರಿ ಬಾಲಿವುಡ್ ನಟ ಸಲ್ಮಾನ್ ನಿಗಿಂತ ಬ್ಯುಸಿ. 2013ರ ತನಕ ಗೋಪಾಲ ಎಂಬ ಹೆಸರಿನ ಹೋರಿಯ ಸೇವೆ ಲಭ್ಯವಿಲ್ಲ.

ಹಸುಗಳಿಗೆ ಗಬ್ಬ ಮಾಡುವುದರಲ್ಲಿ ನಿಷ್ಣಾತನಾದ ಈ ಕೆಂಬಣ್ಣದ ಹೋರಿಗೆ ಎಲ್ಲಿಲ್ಲದ ಬೇಡಿಕೆ. ಇದುವರೆವಿಗೂ ಸರಿ ಸುಮಾರು 486 ಹಸುಗಳಿಗೆ ಗಬ್ಬ ಮಾಡಿ ತನ್ನ ಪ್ರಾಬಲ್ಯ ಮೆರೆದಿದ್ದಾನೆ. ದೂರದ ಹರ್ಯಾಣದಿಂದ

ಹಸುಗಳ ಗರ್ಭಾಧಾರಣೆಗೆ ವೀರ್ಯದಾನಮಾಡುವ ಸನೋರ್ಸಾ ಗೋಶಾಲೆಯ ಈ ಗೋಪಾಲನಿಗೆ ಗುಜರಾತ್, ಪಂಜಾಬ್ ಹಾಗೂ ಹರ್ಯಾಣದಲ್ಲಿ ಭಾರಿ ಬೇಡಿಕೆ. ಕಳೆದ ಎಂಟು ತಿಂಗಳಿನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದ ಗೋಪಾಲನ ಷೆಡ್ಯೂಲ್ ಮೆಂಟೈನ್ ಮಾಡಲು ಆಗದೆ ಅಪಾಂಟ್ಮೆಂಟ್ ಸಿಸ್ಟಮ್ ಜಾರಿ ಮಾಡಬೇಕಾಗಿದೆ ಎನ್ನುತ್ತಾರೆ ಗೋಶಾಲೆ ಟ್ರಸ್ಟಿ ಪರೇಶ್ ಸಿನ್ಹಾ ಝಾಲ.

ಗೋಪಾಲನ ಬೀಜಫಲ : ಗೋಪಾಲನ ಸಂಭೋಗದಿಂದ ಹುಟ್ಟಿರುವ ವಿಜಯ್' ಎಂಬ 4.5 ವರ್ಷದ ಯುವ ಹೋರಿಯೊಂದು ಈಗಲೇ ಹೆಣ್ಣು ಹಸುಗಳ ವಾಸನೆ ಹಿಡಿದು ಎಗರಿ ಬೀಳುತ್ತಿದೆ. ಸಾಮಾನ್ಯ ಹಸುಗಳು 1.5 ಲೀಟರ್ ಹಾಸು ನೀಡಿದರೆ ಗೋಪಾಲನಿಂದ ಗಬ್ಬ ಭರಿಸಿದ ಹಸುಗಳು ಬೆಳೆಯುತ್ತ 15 ರಿಂದ 17 ಲೀಟರ್ ಹಾಲು ಕೊಡುತ್ತವೆ. ಆದ್ದರಿಂದಲೇ ಗೋಪಾಲನಿಗೆ ಇಷ್ಟೊಂದು ಬೇಡಿಕೆ ಬಂದಿದೆ ಎಂದು ಟ್ರಸ್ಟಿ ಹೇಳುತ್ತಾರೆ.

ಸಾಮಾನ್ಯ ಹೋರಿಯೊಂದು ಜೀವಿತಾವಧಿಯಲ್ಲಿ 50 ರಿಂದ 70 ಹಸುಗಳಿಗೆ ಗಬ್ಬ ಬರಿಸಲು ಶಕ್ತವಾಗಿರುತ್ತದೆ. ಆದರೆ ಗೋಪಾಲ ಈಗಾಗಲೇ ದಾಖಲೆ ಪ್ರಮಾಣದಲ್ಲಿ ಹಸುಗಳ ಗರ್ಭಕ್ಕೆ ಕಾರಣವಾಗಿರುವುದಲ್ಲದೆ, ಇನ್ನೂ 7 ವರ್ಷ ಬೀಜ ಬಿತ್ತುವ ಶಕ್ತಿ ಹೊಂದಿದ್ದಾನೆ ಎಂದು ಪಶು ವೈದ್ಯರು ಹೇಳುತ್ತಾರೆ.

ಆಸೀಸ್ ದಾನಿ: ಆಸ್ಟ್ರೇಲಿಯಾದಲ್ಲಿರುವ ಕಛ್ ಮೂಲದ ನಿವಾಸಿಯೊಬ್ಬರು ಐದೂವರೆ ವರ್ಷದ ಹಿಂದೆ ಗೋಪಾಲನನ್ನು ಈ ಗೋಶಾಲೆಗೆ ದಾನ ಮಾಡಿದ್ದರು. ಕಾತಿಯಾವರ್ ಅರಣ್ಯ ಗಿರ್ ಪರ್ವತ ಪ್ರದೇಶಕ್ಕೆ ಸೇರಿದ ಗಿರ್ ತಳಿಯ ಗೋಪಾಲನಿಗೆ ಜೂನ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮಾತ್ರ ಬಿಡುವು, ಬಾಕಿಯಂತೆ ಆ ಕೆಲ್ಸದಲ್ಲಿ ಫುಲ್ ಬ್ಯುಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+