ನಿರುದ್ಯೋಗಿ ಯುವಕನಿಂದ ದುಬೈ ಯುವತಿ ಅಪಹರಣ, ಬಲಾತ್ಕಾರ

'ದುಬೈನ ಅಲ್ ಹಮ್ರಿಯಾ ಹೈಪರ್ ಮಾರ್ಕೆಟ್ ಆವರಣದಲ್ಲಿ ಪಾರ್ಕ್ ಮಾಡಿದ್ದ ನನ್ನ ಕಾರನ್ನು ಸಂಜೆ 5.30ರಲ್ಲಿ ಹೊರ ತೆಗೆಯುವ ಪ್ರಯತ್ನದಲ್ಲಿದ್ದೆ. ಕಾರು ಸ್ಟಾರ್ಟ್ ಆಗಲಿಲ್ಲ. ಆಗ ಆರೋಪಿ ಯುವಕಿ ಕಾರಿನ ಬಳಿ ಬಂದು ನೆರವು ನೀಡುವುದಾಗಿ ಹೇಳಿದ. ಆದರೆ ಆತನ ಸಹಾಯ ಬೇಡವೆಂದು ನಿರಾಕರಿಸಿದೆ'.
'ಈ ಹಿಂದೆ ಒಮ್ಮೆ ಅವನನ್ನು ನೋಡಿದ್ದೆ. ಅವನು ಆಗಲೂ ನನ್ನೊಂದಿಗೆ ಜಗಳ ತೆಗೆದಿದ್ದ. ಅದೇ ಸಲುಗೆಯ ಮೇಲೆ ಕಾರೊಳಕ್ಕೆ ನುಗ್ಗಿದವನೆ ತಾನು ಹೇಳುವ ಮಾರ್ಗದಲ್ಲಿ ಕಾರನ್ನು ಚಲಾಯಿಸುವಂತೆ ಬಲಾತ್ಕರಿಸಿದ'.
'ಮಾರ್ಗ ಮಧ್ಯೆ ಅವನ ಮನೆ ಬಂದಾಗ ಕೆಳಗಿಳಿದು ತೊಲಗು ಎಂದೆ. ಕೆಳಗಿಳಿದವನೇ ಮನೆಗೆ ಹೋಗುತ್ತಾನೆ ಎಂದುಕೊಂಡೆ. ಆದರೆ ಅವನು ನನ್ನ ಕಾರಿಗೆ ಅಡ್ಡ ಬಂದ. ನನ್ನ ಕೆನ್ನೆಗೆ ಎರಡೇಟು ಕೊಟ್ಟು, ನನ್ನ ಕೈಗಳನ್ನು ಹಿಂದಕ್ಕೆ ತಿರುಚಿ, ಕಟ್ಟಿ ಹಾಕಿದ. ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಜೋರು ಮಾಡಿದ. ವಿಧಿಯಿಲ್ಲದೆ ಸುಮ್ಮನಾದೆ'.
'ಇಡೀ ರಾತ್ರಿ ನನ್ನನ್ನು ಕಾರಿನಲ್ಲಿ ಸುತ್ತಿಸಿ ಬೆಳಗಿನ ಜಾವ 3 ಗಂಟೆ ವೇಳೆಗೆ ಹಮ್ರಿಯಾ ಹೈಪರ್ ಮಾರ್ಕೆಟ್ ಆವರಣಕ್ಕೆ ವಾಪಸಾದ. ಅಲ್ಲಿ ಕಾರಿನಲ್ಲಿ ನನ್ನನ್ನು ಮುದ್ದಿಸಿದ. ಅಪ್ಪಿ ಮುದ್ದಾಡಿದ. ಆದರೆ ನಾನು ಇದನ್ನು ನಾನು ವಿರೋಧಿಸುತ್ತಲೇ ಇದ್ದೆ. ಸುಮಾರು ಹೊತ್ತು ಹೀಗೇ ಅವನ ಆಟ ನಡೆದಿತ್ತು. ಕೊನೆಗೆ ಅಲ್ ಕ್ವಾಸಿಸ್ ಠಾಣೆ ಎದುರು ಕಾರನ್ನು ನಿಲ್ಲಿಸಿ, ಮನೆಗೆ ಹೋಗು ಅಂದ' ಎಂದು ಯುವತಿ ತನ್ನ ಗೋಳಿನ ಕಥೆಯನ್ನು ತಕ್ಷಣ ಪೊಲೀಸರಿಗೆ ಹೇಳಿಕೊಂಡಿದ್ದಾಳೆ.












Click it and Unblock the Notifications