ಅಣ್ಣಾ ಹೋರಾಟದಿಂದ ಏನು ಪ್ರಯೋಜನ : ಯಡಿಯೂರಪ್ಪ

ರೇಸ್ ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಿಎಸ್ ವೈ, ಅಣ್ಣಾ ಹೋರಾಟದ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯಿಸಿದರೆ ಅದು ಗೊಂದಲಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೆ ಅಣ್ಣಾ ನಡೆಸುತ್ತಿರುವ ಹೋರಾಟ ಏನೂ ಫಲ ಕೊಡುವಂಥದ್ದಲ್ಲ ಎಂದು ಹೇಳಿದರು.
ಪಕ್ಷ ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಹೈಕಮಾಂಡ್ ಆದೇಶದ ಮೇರೆ ರಾಜೀನಾಮೆ ನೀಡಿದ್ದೇನೆ. ನಾನು ಎಲ್ಲಾ ಆರೋಪಗಳಿಂದ ಮುಕ್ತನಾಗಿ ಒಳ್ಳೆ ಇಮೇಜ್ ಪಡೆಯ ಬೇಕೆನ್ನುವುದು ವರಿಷ್ಠರ ನಿಲುವು. ನಾನು ಎಲ್ಲಾ ಆರೋಪಗಳಿಂದ ಮುಕ್ತನಾಗುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ಅಣ್ಣಾ ಉಪವಾಸ ಸತ್ಯಾಗ್ರಹದಿಂದ ಪ್ರಯೋಜನವಿಲ್ಲ ಎಂಬ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಸಿಎಂ, ಅಣ್ಣಾ ಹಜಾರೆಯ ಹೋರಾಟವನ್ನು ಬೆಂಬಲಿಸುತ್ತೇನೆ ಎಂದು ಮಹಾತ್ಮಾ ಗಾಂಧಿ ವೃತ್ತದ ಬಳಿ ಧರಣಿ ನಡೆಸಲು ಎರಡು ದಿನಗಳ ಹಿಂದೆ ಯಾಕೆ ಮುಂದಾಗಿದ್ದರು ಎನ್ನುವುದು ಜನಸಾಮಾನ್ಯರ ಪ್ರಶ್ನೆ?












Click it and Unblock the Notifications