ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಗಣಿ ವೀರರಿಗೆ ಸಚಿವ ಸ್ಥಾನ: ಕಾನೂನಿಗೆ ಮೊರೆ

By Srinath
|
Google Oneindia Kannada News

reddys-cabinet-birth-legal-opinion-sought
ಶಿವಮೊಗ್ಗ, ಆಗಸ್ಟ್ 19: ಅಕ್ರಮ ಗಣಿಗಾರಿಕೆ ವೀರರು ಎಂದೇ ಗುರುತಿಸಲ್ಪಟ್ಟಿರುವ ಬಳ್ಳಾರಿ ರೆಡ್ಡಿ ಸೋದರರ ಬಗ್ಗೆ ಲೋಕಾಯುಕ್ತ ವರದಿಯಲ್ಲಿರುವ ಆರೋಪ ಕುರಿತು ಕಾನೂನು ತಜ್ಞರು ನೀಡುವ ವರದಿ ಆಧರಿಸಿ ಅವರಿಗೆ ಸಚಿವ ಸ್ಥಾನ ನೀಡಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಲೋಕಾಯುಕ್ತ ವರದಿಯಲ್ಲಿ ರೆಡ್ಡಿ ಸೋದರರ ಹೆಸರು ಪ್ರಸ್ತಾಪಿಸಿರುವ ಲೋಕಾಯುಕ್ತರು ಇವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವಂತೆ ಸಲಹೆ ನೀಡಿದ್ದಾರೆ. ಆದರೆ ರೆಡ್ಡಿ ಸೋದರರು ಆರೋಪ ನಿರಾಕರಿಸಿ ಅರ್ಜಿ ನೀಡಿದ್ದಾರೆ. ಅದನ್ನು ಕಾನೂನು ತಜ್ಞರಿಗೆ ನೀಡಲಾಗಿದೆ.

ತಜ್ಞರ ವರದಿ ಪರಿಶೀಲಿಸಿದ ನಂತರ ಈ ವಿಷಯದಲ್ಲಿ ಪಕ್ಷ ಸ್ಪಷ್ಟ ನಿಲುವು ತೆಗೆದುಕೊಳ್ಳಲಿದೆ. ಹೀಗಾಗಿ ರೆಡ್ಡಿ ಸೋದರರಿಗೆ ಸ್ಥಾನ ಕಾದಿರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರು.

ಉಳಿದ ಸಚಿವ ಸ್ಥಾನಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು. ಜಿಲ್ಲಾವಾರು, ಜಾತಿವಾರು, ಪ್ರಾಂತ್ಯವಾರು ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಈ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

English summary
As the Bellary Reddy brothers yearning for rebirth in DVS cabinet the President of BJP State unit KS Eshvarappa has categorically said that the issue will be settled only after a thorough legal opinion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X