ಕರುಣಾ ಕನಸಿನ ಸೌಧದ ಮೇಲೆ ಟಿಂಚರ್ ಸುರಿದ ಜಯಾ

TN CM Jayalalitha
ಚೆನ್ನೈ, ಆ.19: ಸುಮಾರು 1,200 ಕೋಟಿ ರು ಸುರಿದು ಕನಸಿನ ಸಚಿವಾಲಯ ಸಂಕೀರ್ಣ ಕಟ್ಟಡ ಕಟ್ಟಿ ಭರ್ಜರಿಯಾಗಿ ಉದ್ಘಾಟನೆ ಮಾಡಿದ್ದ ಮಾಜಿ ಸಿಎಂ ಕರುಣಾನಿಧಿಗೆ ಹಾಲಿ ಸಿಎಂ ಜಯಲಲಿತಾ ಶಾಕ್ ಕೊಟ್ಟಿದ್ದಾರೆ. ಕರುಣಾ ಕನಸಿನ ಸೌಧವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬದಲಾಯಿಸುವುದಾಗಿ ಹೇಳಿದ್ದಾರೆ.

ಕರುಣಾ ಹಾಗೂ ಜಯಾ ಹಗೆತನದಿಂದ ತಮಿಳುನಾಡಿನ ಭಾರಿ ಅಭಿವೃದ್ಧಿ ಕಾರ್ಯಗಳಾಗುತ್ತಿರುವುದೇನೋ ನಿಜ ಆದರೆ, ಸಚಿವಾಲಯವನ್ನು ಬದಲಿಸುವ ಮಟ್ಟಿಗೆ ಜಯಾ ಇಳಿದಿರುವುದು ಹಲವರ ಹುಬ್ಬೇರಿಸಿದೆ. ಅದೂ ಅಸೆಂಬ್ಲಿಯಲ್ಲಿ ಈ ಬಗ್ಗೆ ಜಯಲಲಿತಾ ಘೋಷಿಸಿರುವುದು ಡಿಎಂಕೆ ಶಾಸಕರ ಬೆನ್ನಲ್ಲಿ ನಡುಕ ಹುಟ್ಟಿಸಿದೆ.

ಜಯಾ ಸಿಎಂ ಆಗಿ ಪದಗ್ರಹಣ ಮಾಡಿದ ತಕ್ಷಣವೇ ಕರುಣಾ ಕಟ್ಟಡದಿಂದ ಸಚಿವಾಲಯವನ್ನು ಫೋರ್ಟ್ ಸೇಂಟ್ ಜಾರ್ಜ್ ಕಟ್ಟಡಕ್ಕೆ ವರ್ಗಾಯಿಸಿದರು. ಮಾರ್ಚ್ ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಿದ ಈ ಸಚಿವಾಲಯ ಕಟ್ಟಡದಲ್ಲಿ ರಾಜನಂತೆ ಮೆರೆಯಲು ಕರುಣಾಗೆ ಆಗಲೇ ಇಲ್ಲ.

ಆಲ್ ಇಂಡಿಯಾ ಮೆಡಿಕಲ್ ಸೈನ್ ಇನ್ಸ್ ಸ್ಟಿಟ್ಯೂಟ್ ಹಾಗೂ ಆರ್ಮಿ ಆಸ್ಪತ್ರೆ ಮಾದರಿಯಲ್ಲಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಾಲೇಜು ಆಗಿ ಸಚಿವಾಲಯವನ್ನು ಬದಲಿಸಲು ಖ್ಯಾತ ವೈದ್ಯರ ಸಮೂಹದೊಂದಿಗೆ ಜಯಾ ಚರ್ಚೆ ನಡೆಸಿದ್ದಾರೆ.

ಕರುಣಾ ಕನಸಿನ ಸೌಧವನ್ನು ಆಸ್ಪತ್ರೆಯಾಗಿ ಬದಲಿಸಿ ಎಂಜಿಆರ್ ಹೆಸರಿಡಲು ಯೋಜಿಸಲಾಗಿದೆ. ಜೊತೆಗೆ ಕಟ್ಟಡ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲಾಗುವುದು ಎಂದು ಎಐಎಡಿಎಂಕೆ ಪ್ರಕಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+