ಯಡಿಯೂರಪ್ಪ ಕುಳಿತರು ಧರಣಿಗೆ: ಯಾರು ಏನೆಂದರು!?

ಯಡ್ಡಿ ಧರಣಿ ಅರ್ಥಹೀನ: ಏನು ನೈತಿಕತೆ ಇದೆಯೆಂದು ಇವಯ್ಯ ಧರಣಿಗೆ ಕುಳಿತುಕೊಳ್ಳುತ್ತಾನಂತೆ. ಎಲ್ಲ ಬೂಟಾಟಿಕೆ' ಎಂದು ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಯಡಿಯೂರಪ್ಪ ಅವರ ಧರಣಿ ಬಗ್ಗೆ ಕಿಡಿಕಾರಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮನುಷ್ಯ ಈಗ ಭ್ರಷ್ಟಾಚಾರದ ವಿರುದ್ಧ ಅದೂ ಅಣ್ಣಾಗೆ ಬೆಂಬಲ ಸೂಚಿಸಿ, ಧರಣಿಗೆ ಕುಳಿತುಕೊಳ್ಳುವುದು ನಗೆಪಾಟಲಿಗೆ ಈಡಾಗುತ್ತದೆ ಎಂದು ಅವರು ಸೂಚ್ಯವಾಗಿ ಹೇಳಿದರು.
ಲೋಕಪಾಲ, ಅಣ್ಣಾ ಅಂತೆಲ್ಲಾ ಬಡಬಡಾಯಿಸುತ್ತಿರುವ ಬಿಎಸ್ ವೈ: ಇನ್ನು, ವಿಶ್ರಾಂತಿ ಜೀವನ ನಡೆಸಿರುವ ನ್ಯಾ. ಸಂತೋಷ್ ಹೆಗ್ಡೆ ಅವರು ಯಡಿಯೂರಪ್ಪನವರ ಧರಣಿಯನ್ನು ಕೇಳಿ ಯಾವ ಕಡೆಯಿಂದ ನಗಬೇಕೋ ತಿಳಿಯದೇ ಫ್ರೀಂಡಂ ಪಾರ್ಕಿನಲ್ಲಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. 'ಈ ಮನುಷ್ಯ ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಲಿಲ್ಲ; ಈಗ ಲೋಕಪಾಲ, ಅಣ್ಣಾ ಅಂತೆಲ್ಲಾ ಬಡಬಡಾಯಿಸುತ್ತಿದ್ದಾರೆ' ಎಂದೂ ಸ್ವಗತದಲ್ಲಿ ಹೇಳಿಕೊಂಡಿದ್ದಾರೆ.
ಈ ಮಧ್ಯೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಠಿಕಾಣಿ ಹೂಡಿರುವ ಖೈದಿ ನಂಬರ್ 7801 ಮತ್ತು ಅವರ ಪಟಾಲಂ ಜೈಲಿನಲ್ಲಿದ್ದುಕೊಂಡೇ ಯಡಿಯೂರಪ್ಪಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬುದು ಶುದ್ಧ ಕುಹಕ!












Click it and Unblock the Notifications