ಯಡಿಯೂರಪ್ಪನೂ ಕುಳಿತರು ಧರಣಿಗೆ! ಅಣ್ಣಾಗೆ ಜೈ ಹೋ

ಡಿಯೂರಪ್ಪ ಗುರುವಾರ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲು ನಿರ್ಧರಿಸಿದ್ದು, ತಮ್ಮ ಪಕ್ಷ ಬಿಜೆಪಿಯ ಬ್ಯಾನರ್ ಹೊರತುಪಡಿಸಿ ಪಕ್ಷಾತೀತವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಈ ಧರಣಿ ಮೂಲಕ ಯಡಿಯೂರಪ್ಪ ಬಿಜೆಪಿಯಿಂದ ಭಿನ್ನ ಹೆಜ್ಜೆ ಹಾಕಿದ್ದು, ಇದರಲ್ಲಿ ಅವರ ಬಣದ ಮಂತ್ರಿಗಳು ಹಾಗೂ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಣ್ಣಾ ಹಜಾರೆ ಹೋರಾಟಕ್ಕೆ ಜಯ ಸಿಗುವವರೆಗೆ ಧರಣಿ ನಡೆಸುವುದಾಗಿ ಬುಧವಾರ ಸುದ್ದಿಗಾರರಿಗೆ ತಿಳಿಸಿದ ಯಡಿಯೂರಪ್ಪ, ಈ ಧರಣಿ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದು ಹೇಳಿದರು.
ಪ್ರಜಾಸತ್ತಾತ್ಮಕ ಹೋರಾಟಕ್ಕೆ ಕೇಂದ್ರ ಮಾಡಿರುವ ಅಪಮಾನವಿದು. ಹಜಾರೆ ಪ್ರತಿಪಾದಿಸುವ ಜನ ಲೋಕಪಾಲ ಮಸೂದೆಯನ್ನೇ ಮಂಡಿಸಬೇಕು. ಪ್ರಧಾನಿಯನ್ನೂ ಅದು ಒಳಗೊಳ್ಳಬೇಕು ಎಂದು ಯಡಿಯೂರಪ್ಪ ಬಲವಾಗಿ ಪ್ರತಿಪಾದಿಸಿದರು.











Click it and Unblock the Notifications