ಬೇಗ ಎದ್ದೇಳು ಅಂದದ್ದಕ್ಕೆ ಯುವತಿ ಆತ್ಮಹತ್ಯೆ

ಅಸಲಿಗೆ ನೇತ್ರಾವತಿಯ ಆತ್ಮಹತ್ಯೆಗೆ ಕಾರಣ ಅಮ್ಮನ ಬೈಯ್ಗುಳವಂತೆ. ನೇತ್ರಾ ದಿನಾ ಬೆಳಗ್ಗೆ ತಡವಾಗಿ ಎದ್ದೇಳುವ ಅಭ್ಯಾಸ ರೂಡಿಸಿಕೊಂಡಿದ್ದಳು ಎನ್ನಲಾಗಿದೆ. ಇದಕ್ಕೆ ಆಕೆಯ ತಾಯಿ ದಿನಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.
ನಿನ್ನೆ ಭಾನುವಾರ. ರಜಾದಿನವಾಗಿರುವುದರಿಂದ ಹಾಸಿಗೆ ಬಿಟ್ಟು ನೇತ್ರ ಇನ್ನೂ ಎದ್ದಿರಲಿಲ್ಲ. ಆಗಲೇ ಅಮ್ಮನ ಬೈಯ್ಗುಳ ಆರಂಭವಾಗಿತ್ತು. ಇದರಿಂದ ಮನನೊಂದು ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಶಾಶ್ವತ ನಿದ್ದೆಗೆ ಜಾರಿದ್ದಾಳೆ.
ನೇತ್ರಾವತಿ ವಿಜಯ ಕಾಲೇಜಿನಲ್ಲಿ 3ನೇ ವರ್ಷದ ಬಿಎಸ್ಸಿ ಮಾಡುತ್ತಿದ್ದಳು. ಈಕೆಯ ತಂದೆ ಕೆಎಸ್ಆರ್ಪಿಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.












Click it and Unblock the Notifications