ಉಳ್ಳಾಲದಲ್ಲಿ ರೇವ್ ಪಾರ್ಟಿ, ಬಜರಂಗಿಗಳ ದಾಳಿ

ಉಳ್ಳಾಲದ ಖಾಸಗಿ ರೆಸಾರ್ಟ್ ನಲ್ಲಿ ಹುಟ್ಟುಹಬ್ಬದ ಹೆಸರಲ್ಲಿ ಹುಡುಗ ಹುಡುಗಿಯರು ನಂಗ್ ನಾಚ್ ನಲ್ಲಿ ತೊಡಗಿದ್ದರು. ಈ ಸುದ್ದಿ ತಿಳಿದ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಬೆಳಗಿನ ಜಾವ ದಾಳಿ ಮಾಡಿದ್ದಾರೆ.
ವ್ಯಕ್ತಿಯೊಬ್ಬರು ಹುಟ್ಟುಹಬ್ಬ ಆಚರಣೆಗೆಂದು ರೆಸಾರ್ಟ್ ಕಾದಿರಿಸಿದ್ದರು. ಆದರೆ ತಡರಾತ್ರಿವರೆಗೂ ಯುವಕ-ಯುವತಿಯರು ಮಜಾ ಉಡಾಯಿಸುತ್ತಿರುವ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ ಕಂಗೆಡಿಸಿದರೆನ್ನಲಾಗಿದೆ.
ಈ ದಾಳಿ ಸುದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಬಂದ ಉಳ್ಳಾಲ ಪೊಲೀಸರು ಸುಮಾರು 20ಕ್ಕೂ ಹೆಚ್ಚು ದ್ವಿಚಕ್ರವಾಹನಗಳ ಸಹಿತ ಯುವಕರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.












Click it and Unblock the Notifications