ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಐಡಿಗೆ ಬೇಕಾದ ಯೋಗೇಶ್ವರ್ ಗೆ ಸಚಿವ ಸ್ಥಾನ ಏಕೆ?

By Mahesh
|
Google Oneindia Kannada News

Minister CP Yogeshwar
ಚನ್ನಪಟ್ಟಣ ಆ.14: ಖಾಸಗಿ ಟೌನ್‌ಶಿಪ್ ನಿವೇಶನ ಹಂಚಿಕೆ ಹಗರಣದ ರುವಾರಿಯಾಗಿ, ಸಾವಿರಾರು ಮಂದಿಗೆ ವಂಚಿಸಿದ ಆರೋಪ ಹೊತ್ತಿರುವ ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿಐಡಿ ಚಾರ್ಜ್‌ಶೀಟ್ ಎದುರಿಸುತ್ತಿರುವ ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿರುವ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಅತೀವ ಅಸಮಾಧಾನ ಉಂಟಾಗಿದೆ.

" ಆರೋಪಿ ಸ್ಥಾನದಲ್ಲಿರುವ ಸಿ.ಪಿ ಯೋಗೇಶ್ವರನಿಗೆ ಸ್ಥಾನ ನೀಡುವುದಾದರೆ ಅದು ಪಕ್ಷದ ನಿಯಮ ಮುರಿದಂತೆ, ಅಕ್ರಮ, ಭ್ರಷ್ಟಾಚಾರದಲ್ಲಿ ತೊಡಗಿರುವವರು ಸಚಿವರಾಗಬಹುದಾದರೆ, ಯಡಿಯೂರಪ್ಪ ಅವರನ್ನು ಏಕೆ ಪಟ್ಟದಿಂದ ಕೆಳಗಿಳಿಸಬೇಕಿತ್ತು? " ಎಂದು ಪಕ್ಷದ ಕೆಲವು ನಿಷ್ಠಾವಂತ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಆದರೆ, ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಸವಾಲು ಹಾಕಲೆಂದು ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪಕ್ಷ ಮೂಲಗಳು ಹೇಳುತ್ತಿವೆ.

ಯೋಗೇಶ್ವರ 1995-2006ರ ಮಧ್ಯೆ ಖಾಸಗಿ ಟೌನ್‌ಶಿಪ್ಪೊಂದರಲ್ಲಿ ಸೈಟುಗಳನ್ನು ನೀಡುವುದಾಗಿ ಭಾರೀ ಸಂಖ್ಯೆಯ ಹೂಡಿಕೆದಾರರಿಗೆ 37 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಸಿಐಡಿ 2010ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು .

English summary
Minister CP Yogeshwar who has been named and charge sheeted by CID Police. Yogeshwar is facing illegal township distribution case. BJP made a mistake by giving cabinet ministry to Yogeshwar and asking Yeddyurappa to step down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X