ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗೆ ಸಂಭ್ರಮದ ಸನ್ಮಾನ

ಬಿಜೆಪಿ ಕಾರ್ಯಕರ್ತನಾಗಿ ಸವಾಲುಗಳನ್ನು ಎದುರಿಸುತ್ತಲೇ ಈ ಹಂತಕ್ಕೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಸವಾಲುಗಳನ್ನು ಮತ್ತಷ್ಟು ಯಶಸ್ವಿಯಾಗಿ ಎದುರಿಸುತ್ತೇನೆಂಬ ಆತ್ಮವಿಶ್ವಾಸ ನನ್ನಲ್ಲಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಪಕ್ಷದ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.
ಪಕ್ಷ ವಹಿಸಿರುವ ಹೊಣೆಯನ್ನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಎಲ್ಲರ ಸಹಕಾರದಿಂದ ನಿರ್ವಹಿಸುವ ನಂಬಿಕೆ ನನ್ನದು, ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು. ನಂತರ ಮುಖ್ಯಮಂತ್ರಿಯವರು ಕಲ್ಲಡ್ಕ ಶ್ರೀರಾಮ ಪ್ರೌಡಶಾಲೆಗೆ ತೆರಳಿದರು. ಅಲ್ಲಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ತೆರಳಿ, ಹುಟ್ಟೂರಿಗೆ ಭೇಟಿ ನೀಡಿ ರಾತ್ರಿ ಮಂಗಳೂರಿನ ತಮ್ಮ ನಿವಾಸದಲ್ಲಿ ವಾಸ್ತವ್ಯ ಮಾಡುತ್ತಾರೆ.
ಧರ್ಮಸ್ಥಳಕ್ಕೆ ಭೇಟಿ : ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಮಂಗಳೂರು ಪ್ರವಾಸದಲ್ಲಿರುವ ಡಿವಿಎಸ್ ಧರ್ಮಸ್ಥಳಕ್ಕೆ ಶನಿವಾರ ಸುರಿಯುತ್ತಿರುವ ಮಳೆಯಲ್ಲಿಯೇ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ ನಮಿಸಿದರು.











Click it and Unblock the Notifications