ಬೆಂಗಳೂರು ಕ್ರೈಂ ಬೀಟ್ : ಭದ್ರತಾ ಸಿಬ್ಬಂದಿ ಕೈ ಕಟ್

ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎಟಿಎಂನಲ್ಲಿ ಹಣ ಜಮಾ ಮಾಡಿ ವಾಪಸ್ ಆಗುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಜರುಗಿದೆ. ವಾಹನದಲ್ಲಿ ಹಣ ಇರಬಹುದೆಂದು ತಿಳಿದ ದುಷ್ಕರ್ಮಿಗಳು ವಾಹನದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಆಗಿರುವ ನಿವೃತ್ತ ಸೈನಿಕ ಚಂದ್ರಮೂರ್ತಿ ಮೇಲೆ ಲಾಂಗ್ ನಿಂದ ದಾಳಿ ಮಾಡಿದ್ದಾರೆ.
ದಾಳಿಯಲ್ಲಿ ಚಂದ್ರಮೂರ್ತಿ ಕೈಗೆ ಕಟ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೆರವಿಗೆ ಬಂದ ಕೃಷ್ಣಮೂರ್ತಿ ಎಂಬುವವರ ಮೇಲೆಯೂ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಚಂದ್ರಮೂರ್ತಿಯನ್ನು ಫಾರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಣ ಸಿಗುವುದಿಲ್ಲವೆಂದು ತಿಳಿದ ದುಷ್ಕರ್ಮಿಗಳು ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಜನನಿಬಿಡವಿರುವ ಮೂಡಲಪಾಳ್ಯದಲ್ಲಿ ಹಾಡುಹಗಲೇ ಈ ಘಟನೆ ನಡೆದಿದ್ದು ನಿವಾಸಿಗಳನ್ನು ಭಯಭೀತರನ್ನಾಗಿ ಮಾಡಿದೆ. ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications