ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡ 'ಅಣ್ಣ'ನ ಉಪದೇಶಕ್ಕೆ ಭಾರತ ಕಿಡಿ

By Mahesh
|
Google Oneindia Kannada News

India Slams USA
ನವದೆಹಲಿ, ಆ.13: ಜನ ಲೋಕಪಾಲ ಮಸೂದೆಗಾಗಿ ಒತ್ತಾಯಿಸಿ ಅಣ್ಣಾ ಹಜಾರೆ ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಲು ಇನ್ನು ಮೂರು ದಿನ ಮಾತ್ರ ಉಳಿದಿದೆ. ಈ ಮಧ್ಯೆ ಶಾಂತಿಯುತ ಪ್ರತಿಭಟನೆಗಳನ್ನು ಭಾರತ ಸರ್ಕಾರ ಸಂಯಮದಿಂದ ನಿಭಾಯಿಸಬೇಕು ಎಂದು ಅಮೆರಿಕ ಉಪದೇಶ ಮಾಡುವುದಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡಿದೆ.

ಉಪವಾಸ ನಡೆಯುವ ಸ್ಥಳದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಮೂರು ದಿನಗಳ ಕಾಲ ಉಪವಸ ಸತ್ಯಾಗ್ರಹ ಹೂಡಲು ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ.

ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ, ಭ್ರಷ್ಟಾಚಾರ ನಿಯಂತ್ರಣ, ಜನ ಲೋಕಪಾಲ ಮಸೂದೆ ಇವು ನಮ್ಮ ಆಂತರಿಕ ವಿಷಯ ಇದರಲ್ಲಿ ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ಅಮೆರಿಕಕ್ಕೆಪ್ರತ್ಯುತ್ತರ ನೀಡಲಾಗಿದೆ.

ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಶಾಂತಿಯುತ ಪ್ರತಿಭಟನೆಗಳ ಬಗ್ಗೆ ಭಾರತ ಸಂಯಮದಿಂದ ನಡೆದುಕೊಳ್ಳುತ್ತದೆ ಎಂಬುದು ನಮ್ಮ ನಿರೀಕ್ಷೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರರಾದ ವಿಕ್ಟೋರಿಯಾ ನುಲ್ಯಾಂಡ್ ಹೇಳಿದ್ದರು.

ರಾಷ್ಟ್ರದ 120 ಕೋಟಿ ಜನರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತ ಹೋರಾಟಗಳಿಗೆ ನಮ್ಮ ಸಂವಿಧಾನದಲ್ಲಿ ಅವಕಾಶವಿದೆ ಇದನ್ನು ನಾವು ಬೇರೊಬ್ಬರಿಂದ ಹೇಳಿಕೊಳ್ಳಬೇಕಾಗಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಷ್ಣು ಪ್ರಕಾಶ್ ಖಾರವಾಗಿ ಉತ್ತರಿಸಿದ್ದಾರೆ.

English summary
India slams USA termed US remarks on Anna hazare is needless and said freedoms of speech and expression, as well as, of peaceful assembly, are enshrined in the Constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X