ಸಿದ್ದು ಸಿಎಂ ಆಗ್ತಾರೆ, ಕಾಂಗ್ರೆಸ್ ಅಧಿಕಾರಕ್ಕೆ ಅಂಬಿ ಭವಿಷ್ಯ

ಬಹುಮತ ನೀಡುವ ಮೂಲಕ ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಅಂಬರೀಷ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಹುಶಃ ರಾತ್ರಿ ಟಿವಿ ನೋಡಿದ್ದರೆ ಅಂಬರೀಷ್ ಗೆ ಅಚ್ಚರಿಯಾಗುತ್ತಿತ್ತು. ಸಿಎನ್ ಬಿಸಿ-ಐಬಿಎನ್ ಸುದ್ದಿವಾಹಿನಿ, ದಿ ಹಿಂದೂ ಪತ್ರಿಕೆ ನಡೆಸಿದ 'ಸ್ಟೇಟ್ ಆಫ್ ದ ನೇಷನ್' ಸಮೀಕ್ಷೆ ವರದಿ ಪ್ರಕಾರ ಕೂಡಾ ಕಾಂಗ್ರೆಸ್ ಚುನಾವಣೆಯಲ್ಲಿ ನಿಚ್ಚಳ ಬಹುಮತ ಪಡೆಯುವುದು ಎಂದು ಹೇಳಲಾಗಿತ್ತು.
ಕಾಂಗ್ರೆಸ್ ನಡಿಗೆ-ಜನರ ಬಳಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ.
ಸಿದ್ದು ಸಿಎಂ ಆಗ್ತಾರೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಲಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಧಿಕಾರದ ಗದ್ದುಗೆಗೆ ತರುತ್ತಾರೆ. ನಾನಂತೂ ಮುಖ್ಯಮಂತ್ರಿಯಾಗುವುದಿಲ್ಲ. ನಾನು ರೇಸ್ ನಲ್ಲಿಲ್ಲ. ನಾನು 15 ಮಂದಿ ಮುಖ್ಯಮಂತ್ರಿಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಎಂದು ಅಂಬರೀಷ್ ಹೇಳಿದರು.
ಭ್ರಷ್ಟರನ್ನು ಓಡಿಸುತ್ತಿದೆ: ಒಂದು ವೇಳೆ ನಾನು ಮುಖ್ಯಮಂತ್ರಿಯಾಗಿದ್ದರೆ, ರೆಡ್ಡಿ ಸೋದರರು ಸೇರಿದಂತೆ ಭ್ರಷ್ಟರನ್ನು ಗಡಿಪಾರು ಮಾಡುತ್ತಿದ್ದೆ ಎಂದು ಗಹಗಹಿಸಿ ನಕ್ಕರು. ಆ ಪಕ್ಷದಂತೆ ನಾವು ಜಗಳ ಆಡಬಾರದು. ಪಕ್ಷವನ್ನು ಕಟ್ಟುವ ಮೂಲಕ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು,












Click it and Unblock the Notifications