ರೆಡ್ಡಿಗಳಿಂದ ಯಡಿಯೂರಪ್ಪಗೆ ಟೋಪಿ ಹಾಕಿ ಸನ್ಮಾನ
ಬಳ್ಳಾರಿ,
ಆ. 12 : ಬಳ್ಳಾರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಮುಂದಿನ ಸರ್ಕಾರಗಳು ಶ್ರಮಿಸುವ - ಚಿಂತಿಸುವ ಅಗತ್ಯವೇ ಇಲ್ಲ. ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಏನೂ ಉಳಿದಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾರ್ಮಿಕವಾಗಿ ನುಡಿದರು. id="toptextpromo">ಮುಂದಿನ
ದಿನಗಳಲ್ಲಿ 25 ಸಂಸದರು, 150 ಶಾಸಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪಕ್ಷ ಯೋಜಿಸುತ್ತಿದೆ ಎಂದು ಯಡಿಯೂರಪ್ಪ ಹೇಳಿದರು. ಮಾಜಿ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಬಳ್ಳಾರಿಗೆ ಬಂದ ಯಡಿಯೂರಪ್ಪನವರನ್ನು ರೆಡ್ಡಿ ಸಹೋದರರು ಮೈಸೂರು ಟೋಪಿ ಹಾಕಿ, ಗಣಪತಿಯ ಮೂರ್ತಿ ನೀಡಿ ಸನ್ಮಾನಿಸಿದರು. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪನವರು
ವಧು-ವರರನ್ನು ಉದ್ದೇಶಿಸಿ ಮಾತನಾಡುವಾಗ ಹಿಂದಿನ ರೋಶಾವೇಶ, ಗತ್ತು ಕಂಡುಬರಲಿಲ್ಲ. ಇದೇ ಸಂದರ್ಭದಲ್ಲಿ ಸಾಹಸಸಿಂಹ ದಿ. ವಿಷ್ಣುವರ್ಧನ್ ಅವರ ಆಳೆತ್ತರದ ಪ್ರತಿಮೆಯನ್ನು ಅನಾವರಣ ಮಾಡಲಾಯಿತು.











Click it and Unblock the Notifications