ಕಾರ್ಮೋಡಗಳ ಮಧ್ಯೆ ಕಾಮನಬಿಲ್ಲು : ಅನಂತ್ ಕುಮಾರ್
ಬಳ್ಳಾರಿ,
ಆ. 12 : ಬಳ್ಳಾರಿ ಜಿಲ್ಲೆ ಈಗ ಕಮಲದ ಭದ್ರಕೋಟೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ, ಸಂಸದ ಅನಂತಕುಮಾರ್ ಅವರು ಘೋಷಣೆ ಮಾಡಿದರು. ಕಾಂಗ್ರೆಸ್‌ನ ಭದ್ರಕೋಟೆಯನ್ನು ಒಡೆಯುವಲ್ಲಿ ಸುಷ್ಮಾ ಸ್ವರಾಜ್, ಜಿಲ್ಲೆಯ ಕಾರ್ಯಕರ್ತರು, ಮುಖಂಡರು ಮತ್ತು ರೆಡ್ಡಿ ಸಹೋದರರು ಸಾಕಷ್ಟು ಶ್ರಮಿಸಿದ್ದಾರೆ. ಇಡೀ ದೇಶದಲ್ಲಿ ಗ್ರಾಮ ಮಟ್ಟದಿಂದಲೂ ಇಲ್ಲಿ ಕಮಲ ಅರಳಿದೆ. ಇನ್ನು ಮುಂದೆಯೂ ಈ ಜಿಲ್ಲೆಯಲ್ಲಿ ಕಮಲ ಅರಳುತ್ತಲೇ ಇರುತ್ತದೆ ಎಂದು ಅವರು ಹೇಳಿದರು. id="toptextpromo">ಕಳೆದ
ಮೂರು ವರ್ಷಗಳಿಂದ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಜಿಲ್ಲೆಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಬಳ್ಳಾರಿ ಈಗ ಬೆಂಗಳೂರು, ಬರೋಡ, ಭುವನೇಶ್ವರಗಳ ಜೊತೆ ಜೊತೆ ಸ್ಪರ್ಧಿಸುವಷ್ಟು ಸಮರ್ಥವಾಗಿ ಅಭಿವೃದ್ಧಿ ಹೊಂದಿದೆ. ಅಭಿವೃದ್ಧಿ ಹೊಂದುತ್ತಿದೆ. ಬಳ್ಳಾರಿ ಬೆಳೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಅವರು ಹೇಳಿದರು. id='are-slot-1' class='oiad oi-axt oiadv'> id='top-searched-articles'>'ಬಿಜೆಪಿಯನ್ನು
ಒಟ್ಟಾಗಿ ಕಟ್ಟೋಣ. ನಾವು ನಿಮ್ಮೊಂದಿಗೆ ಎಂದೆಂದಿಗೂ ಇದ್ದೇವೆ. ನಿಮಗೆ ಅಧಿಕಾರ ಇರಲಿ, ಇಲ್ಲದಿರಲಿ ನಿಮ್ಮೊಂದಿಗೆ ನಾವಿದ್ದೇವೆ" ಎಂದು ಬಳ್ಳಾರಿಯ ರೆಡ್ಡಿ ಸಹೋದರರನ್ನು ಉದ್ದೇಶಿಸಿ ಹೇಳಿದ ಅನಂತಕುಮಾರ್, ಮುಂದಿನ ಜನಾದೇಶದ ಆಶೀರ್ವಾದ ಕೇಳೋಣ. ಕಾರ್ಮೋಡಗಳ ಮಧ್ಯೆ ಕಾಮನಬಿಲ್ಲು ಕಾಣುವಂತೆ ಪ್ರಸ್ತುತ ಶ್ರೀವರಮಹಾಲಕ್ಷ್ಮೀ ಪೂಜೆ ನಮ್ಮೆಲ್ಲರನ್ನೂ ಒಂದೇ ವೇದಿಕೆಗೆ ಕರೆ ತಂದಿದೆ ಎಂದು ಹೇಳಿದರು.











Click it and Unblock the Notifications