ಬಳ್ಳಾರಿ ರಾಜಕೀಯ ಕೆಸರಲ್ಲಿ ಅರಳಿದ ಕಮಲ

ಕಳೆದ ಹನ್ನೆರಡು ವರ್ಷಗಳಿಂದ ಶ್ರಾವಣದ ಎರಡನೇ ಶುಕ್ರವಾರದಂದು ಆಚರಿಸುವ ವರಮಹಾಲಕ್ಷ್ಮಿ ಹಬ್ಬದಂದು ತಪ್ಪದೆ ನಡೆಯುವ ಬೃಹತ್ ಸಾಮೂಹಿಕ ವಿವಾಹಕ್ಕೆ ಬಂದು ಸರಳ ಸಿಂಗಾರ ಮಾಡಿಕೊಂಡ ಬಂದಿದ್ದ 226 ಜೋಡಿ ವಧು-ವರರನ್ನು ಆಶೀರ್ವದಿಸಿದರು.
ಈ ಸಮಾರಂಭಕ್ಕೆ ಬಂದ ಜೋಡಿಗಳ ಕಣ್ಣುಗಳು ಮಾತ್ರ ಹುಡುಕಾಡಿದ್ದು 'ಮನೆಮಗಳು' ಸುಷ್ಮಾ ಸ್ವರಾಜ್ ರನ್ನು. ಶ್ರೀರಾಮುಲು ಬಣ್ಣಿಸಿದಂತೆ ಹದಗೆಟ್ಟು ಹೊಲಸಾಗಿರುವ ರಾಜಕೀಯದಿಂದಾಗಿ ಮುನಿಸಿಕೊಂಡಿರುವ ಸುಷ್ಮಾ ಅವರ ಸ್ಥಾನವನ್ನು ಶೋಭಾ ಕರಂದ್ಲಾಜೆ ತುಂಬಿದ್ದಾರೆ.
ಸುಷ್ಮಾ ಅನುಪಸ್ಥಿತಿಯಲ್ಲಿ ಡಾ. ಬಿಕೆ ಶ್ರೀನಿವಾಸ ಮೂರ್ತಿ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದ್ದು ಶೋಭಾ ಕರಂದ್ಲಾಜೆ. ಹಿಂದೆ ರೆಡ್ಡಿ ಸಹೋದರ ಸಹೋದರಿಯರ ದ್ವೇಷ ಕಟ್ಟಿಕೊಂಡಿದ್ದ ಶೋಭಾ ಈಗ ಬಳ್ಳಾರಿಯ ಮನೆಮಗಳಾಗಿದ್ದಾರೆ. ಕಾಲಾಯತಸ್ಮೈನ್ನಮಃ.
ವಿಷಾದನೀಯ ಸಂಗತಿಯೆಂದರೆ, ಈ ವೇದಿಕೆಯನ್ನು ರಾಜಕಾರಣಿಗಳೆಲ್ಲ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿದ್ದು, ಶ್ರೀರಾಮುಲು ಒಬ್ಬರನ್ನು ಹೊರತುಪಡಿಸಿ. ಯಾರ್ಯಾರು ಏನೇನಂದರು ಮುಂದೆ ಓದಿ.












Click it and Unblock the Notifications