ಬಿಜೆಪಿ ಭ್ರಷ್ಟರ ಗಾಡ್ ಫಾದರ್ ಗಡ್ಕರಿ; ಹರಿಪ್ರಸಾದ್

ಮಧ್ಯಪ್ರದೇಶದ ಗುಡ್ಡಗಾಡು ಜನರ ನೋವು ನಲಿವುಗಳನ್ನು ಆಲಿಸಿ, ಅವರ ಸರಂಕ್ಷಣೆ ಬೇಕಾಗಿರುವ ಕಾರ್ಯಕ್ರಮವನ್ನು ನಿರೂಪಿಸುವಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಬಿಜೆಪಿ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು
ಭ್ರಷ್ಟಾಚಾರದಂಥ ಸೂಕ್ಷ್ಮ ವಿಷಯದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಭಾರತೀಯ ಜನತಾ ಪಾರ್ಟಿಗೆ ಇಲ್ಲ. ಅಕ್ರಮ ಗಣಿಗಾರಿಕೆ, ಭೂ ಹಗರಣಗಳ ಪಾಪಕೂಪದಲ್ಲಿ ಮೀಯುತ್ತಿರುವ ಬಿಜೆಪಿ ಪಕ್ಷದ ಗಾಡ್ ಫಾದರ್ ಗಡ್ಕರಿಗೆ ಪಕ್ಷದಲ್ಲೇ ಬೆಲೆಯಿಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ. ಹಿಂದೊಮ್ಮೆ ಗಡ್ಕರಿ ಅವರನ್ನು ಜೋಕರ್, ನಾಲಾಯಕ್ ಎಂದಿದ್ದ ಹರಿಪ್ರಸಾದ್ ಈ ಬಾರಿ ಸ್ವಲ್ಪ ಹತೋಟಿಯಿಂದ ಉತ್ತರಿಸಿದರು.
ಶಿವಾನಿ ಜಿಲ್ಲೆಯ ಸಮಾರಂಭವೊಂದರಲ್ಲಿ ಮಾತನಾಡಿದ ಹರಿಪ್ರಸಾದ್ ಬಿಜೆಪಿಯ ಹಳೆ ಹಗರಣಗಳ ಪಟ್ಟಿಯ ಸುರಳಿ ಬಿಚ್ಚಿದರು. ಬಂಗಾರು ಲಕ್ಷ್ಮಣ್ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕರ್ನಾಟಕದಲ್ಲಿ ಕೆಜಿಎಫ್ ಶಾಸಕ ಬಿವೈ ಸಂಪಂಗಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಗಣಿ ಲಂಚ, ಭೂ ಹಗರಣದ ಫಲವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಯಡಿಯೂಅಪ್ಪ ಅವರನ್ನು ಜೈಲಿಗೆ ಹಾಕಿ, ಸಿಬಿಐ ತನಿಖೆ ನಡೆಸಿದರೆ ಮಾತ್ರ ಪೂರ್ಣ ಸತ್ಯ ಹೊರಬೀಳುತ್ತದೆ, ಭ್ರಷ್ಟಾಚಾರದ ವಿರುದ್ಧ ಕ್ರಮ ಜರುಗಿಸುವುದರಲ್ಲಿ ಕಾಂಗ್ರೆಸ್ ಎಂದಿಗೂ ಹಿಂದೇಟು ಹಾಕಿಲ್ಲ, ಹಾಕುವುದಿಲ್ಲ. ಬಿಜೆಪಿ ಅಡಿಯಿಂದ ಮುಡಿಯವರೆಗೂ ಭ್ರಷ್ಟವಾಗಿದೆ ಎಂದು ಹರಿಪ್ರಸಾದ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.












Click it and Unblock the Notifications