ಎಸ್ ಎಲ್ ಭೈರಪ್ಪ ಅವರ ಆವರಣ ಹಿಂದಿಗೆ ಅನುವಾದ

ಮುಸ್ಲಿಂ ನವಾಬರ 'ಜನಾನ'ದ ವರೆಗೆ ಕಥೆ ಪ್ರವೇಶಿಸಿದ್ದು ಒಂದು ಕಡೆಯಾದರೆ ಮತ್ತೊಂದೆಡೆ ಬುದ್ಧಿಜೀವಿಗಳ ಹರಕು-ಹುಳುಕನ್ನು ಕಾದಂಬರಿ ಹರಾಜು ಹಾಕಿ ವಿವಾದಕ್ಕೆ ಕಾರಣವಾಗಿತ್ತು. ಒಂದೇ ವರ್ಷದಲ್ಲಿ 20ಕ್ಕೂ ಹೆಚ್ಚು ಮುದ್ರಣಗಳಿಗೂ ಹೋಗಿತ್ತು.
ಮೂಲಕಥೆ ಉತ್ತರ ಭಾರತದ ಹಿಂದಿ ಜಗತ್ತಿನದೇ. ಇದೀಗ ಕಾದಂಬರಿ ಹಿಂದಿ ಜಗತ್ತನ್ನು ಪ್ರವೇಶಿಸಿದೆ. ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿರುವ ಡಾ. ಪ್ರಧಾನ ಗುರುದತ್ ಹಿಂದಿಗೆ ಅನುವಾದಿಸಿದ್ದಾರೆ.
ಇಂಡಿಯಾ ಟುಡೇ ಹಿಂದಿ ಅವತರಣಿಕೆಯ ಈ ವಾರದ ಸಂಚಿಕೆ ಅರ್ಧ ಪುಟದ ವಿಮರ್ಶೆ ಪ್ರಕಟಿಸಿದೆ. ವಿಮರ್ಶಕ ಶಶಿಭೂಷಣ ದ್ವಿವೇದಿಗೆ ಪ್ರಧಾನರ ಅನುವಾದ ಸಮಾಧಾನ ತಂದಿಲ್ಲವಂತೆ.
ಇದೇ ಅಗಸ್ಟ್ 16ರಂದು ಕೇರಳದ ಕೊಚ್ಚಿನ್ ನಲ್ಲಿ ಆವರಣದ ಸಂಸ್ಕೃತ ಆವೃತ್ತಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ 'ಅತ್ಯುತ್ತಮ ಅನುವಾದ" ಪುರಸ್ಕಾರ ಸಿಗಲಿದೆ ಎಂದು ಗೊತ್ತಾಗಿದೆ.
[ಸುದ್ದಿ ಕೃಪೆ: ಕಾಲಂ9]












Click it and Unblock the Notifications