ಬಳ್ಳಾರಿಯಲ್ಲಿ ಪಲ್ಟಿ ಹೊಡೆದ ಪೆಟ್ರೋಲ್ ಟ್ಯಾಂಕರ್

Toppled petrol tanker safely removed
ಬಳ್ಳಾರಿ, ಆ. 9 : ಹಾಸನದಿಂದ ರಾಯಚೂರಿಗೆ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ರಸ್ತೆಬದಿಯ ಕಂದಕಕ್ಕೆ ಉರುಳಿ ರೈಲ್ವೆ ಹಳಿಗಳ ಮೇಲೆ ಬಿದ್ದ ಕಾರಣ ಮಂಗಳವಾರ ಬೆಳಗ್ಗೆ 11 ಗಂಟೆಯವರೆಗೆ ರಾಯದುರ್ಗ - ಬೆಂಗಳೂರು ರೈಲ್ವೆ ಮಾರ್ಗ ಮತ್ತು ಬಳ್ಳಾರಿ - ಬೆಂಗಳೂರು ರಸ್ತೆ ಮಾರ್ಗ ಸ್ಥಗಿತಗೊಂಡಿತ್ತು.

ಹಾಸನದ ಅನಿಲಕುಮಾರ್ ಅವರ ಪೆಟ್ರೋಲ್ ಟ್ಯಾಂಕರ್ 20 ಸಾವಿರ ಲೀಟರ್ ಪ್ರಮಾಣದ ಪೆಟ್ರೋಲ್ ಅನ್ನು ರಾಯಚೂರಿನಲ್ಲಿ ಇರುವ ಬಂಕ್‌ಗೆ ತಲುಪಿಸಬೇಕಿತ್ತು. ಸೋಮವಾರ ಸಂಜೆಯ ವೇಳೆ ಪ್ರಯಾಣ ಪ್ರಾರಂಭಿಸಿದ ಚಾಲಕ ಹಲಕುಂದಿಯನ್ನು ನಸುಕಿನ 3.30ರ ಸುಮಾರಿಗೆ ತಲುಪಿ, ಮತ್ತೊಂದು ವಾಹವನ್ನು ಓವರ್‌ಟೇಕ್ ಮಾಡುವ ಆತುರ ಅಥವಾ ನಿದ್ರೆಯ ಮಂಪರಿನಲ್ಲಿದ್ದ ಕಾರಣ ರಸ್ತೆ ಪಕ್ಕದಕ್ಕೆ ಗಾಡಿಯನ್ನು ವೇಗವಾಗಿ ತಿರುಗಿಸಿದ್ದಾನೆ.

ಆ ಸಂದರ್ಭದಲ್ಲಿ ಟ್ಯಾಂಕರ್ ಪಕ್ಕಕ್ಕೆ ಉರುಳಿ ರೈಲ್ವೆ ಹಳಿಗಳ ಮೇಲೆ ಬಿದ್ದಿತ್ತು. ಜನರು ಪೆಟ್ರೋಲ್ ತುಂಬಿಕೊಳ್ಳಲು ಹಿಂಡು ಹಿಂಡಾಗಿ ಬರುತ್ತಿದ್ದರು. ಆದರೆ, ಪೊಲೀಸರು ಈ ಟ್ಯಾಂಕರ್ ಅನ್ನು ಸುರಕ್ಷಿತವಾಗಿ ತೆಗೆಯಲು ಹರಸಾಹಸಪಡುತ್ತಿದ್ದರು.

ಮಂಗಳವಾರ ಬೆಳಗ್ಗೆ 6 ಗಂಟೆಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ, 3 ಭಾರೀ ಕ್ರೇನ್‌ಗಳ ಸಹಾಯದಿಂದ ಅಪಾಯವಾಗದಂತೆ ಸುರಕ್ಷಿತವಾಗಿ ಟ್ಯಾಂಕರ್ ಅನ್ನು ತೆಗೆದು ರಸ್ತೆ ಬದಿಗೆ ತರುವಲ್ಲಿ ಬೆಳಗ್ಗೆ 11 ಗಂಟೆ ಆಗಿತ್ತು. ಈ ಅವಧಿಯವರೆಗೂ ರಾಯದುರ್ಗ ರೈಲ್ವೆ ಸಂಚಾರವನ್ನು ತಡೆಹಿಡಿಯಲಾಗಿತ್ತು. ಅಲ್ಲದೇ, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+