ರಾಹುಲ್ ಗಾಂಧಿ ಪ್ರಧಾನಿಯಾಗಲು ಸಕಾಲ: ಐಬಿಎನ್

ಸುಮಾರು 20 ರಾಜ್ಯಗಳಿಂದ 18,000ಕ್ಕೂ ಹೆಚ್ಚು ಮಂದಿ ಈ ಸಮೀಕ್ಷೆಯಲ್ಲಿ ಮತ ಹಾಕಿದ್ದಾರೆ. ರಾಹುಲ್ ಗಾಂಧಿ ಶೇ.19 ಮತ ಪಡೆದು ಎಲ್ಲರಿಗಿಂತ ಮುಂದಿದ್ದಾರೆ. ಬಹುತೇಕ ಯುವ ಜನಾಂಗ ರಾಹುಲ್ ಬೆನ್ನ ಹಿಂದೆ ನಿಂತಿದೆ. ಆದರೆ 2004ರಲ್ಲಿ ವಾಜಪೇಯಿ ವಿರುದ್ಧ ಸೋನಿಯಾ ಅವರಿಗೆ ಇನ್ನೂ ಹೆಚ್ಚಿನ ಜನಮತ ಸಿಕ್ಕಿತ್ತು. ಈ ಬಾರಿ ಸೋನಿಯಾ ರೇಸ್ ನಿಂದ ಹೊರಬಿದ್ದಿದ್ದಾರೆ.
ರಾಹುಲ್ ಆಯ್ಕೆಯಾದರೆ ಭ್ರಷ್ಟಾಚಾರ ನಿರ್ಮೂಲನೆ, ಗ್ರಾಮೀಣ ಭಾರತ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ ನಿವಾರಣೆ ಸಾಧ್ಯ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಉಳಿದಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶೇ.5 ರಷ್ಟು ಮತಗಳಿಸಿ ಹಿಂದಿದ್ದರೂ ಪಕ್ಷದ ಪ್ರತಿಸ್ಪರ್ಧಿ ಸುಷ್ಮಾ ಸ್ವರಾಜ್ ಗಿಂತ ಮುಂದಿದ್ದಾರೆ. ಈ ಮಧ್ಯೆ 2004ಕ್ಕೆ ಹೋಲಿಸಿದರೆ ಅಸಹಾಯಕ ನಾಯಕನಾಗಿ ಮಾಸ್ ಅಪೀಲ್ ಇಲ್ಲದ ಮನಮೋಹನ್ ಸಿಂಗ್ ತಮ್ಮ ರೇಟಿಂಗ್ ಹೆಚ್ಚಿಸಿಕೊಂಡಿದ್ದಾರೆ. ಪಕ್ಷ ನಿಷ್ಠತೆ, ಆರ್ಥಿಕ ನೀತಿ ಅವರನ್ನು ಇನ್ನೂ ಕಾಪಾಡಿಕೊಂಡು ಬಂದಿದೆ.












Click it and Unblock the Notifications