ಜಯನಗರ, ಯಶವಂತಪುರದಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ

ಭಾನುವಾರ HRBR ಲೇಔಟ್ ನ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದಾಗ ಅಲ್ಲಿ ನಾಲ್ವರು ಪುರುಷರು ಹಾಗೂ ಮೂವರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಇಬ್ಬರು ಮಹಿಳೆಯರು ಮಣಿಪುರ ಹಾಗೂ ಮಡಿಕೇರಿ ಮೂಲದವರು ಎಂದು ತಿಳಿದು ಬಂದಿದೆ ಇನ್ನೊಬ್ಬಾಕೆ ವಿವರಗಳು ಸಿಕ್ಕಿಲ್ಲ.
ಜಯನಗರ 9ನೇಬ್ಲಾಕ್ ನ ನಿವಾಸಿ ಸೈಯದ್ ಸಫಿರ್ ಅಹ್ಮದ್ ಎಂಬ ವಿಟ ಈ ಮಹಿಳೆಯರಿಗೆ ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದಾನೆ. ಮೈ ಮಾರಿದರೆ ಪ್ರತಿ ಗಂಟೆಗೆ 3 ಸಾವಿರ ರು ನಂತೆ ಸಿಗುತ್ತದೆ ಎಂದು ಆಮಿಷ ಒಡ್ಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಎಚ್ ಎಂಟಿ ಮುಖ್ಯರಸ್ತೆಯಲ್ಲಿರುವ ಬೃಂದಾವನ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಯಶವಂತಪುರ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.












Click it and Unblock the Notifications