ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿಯನ್ನು ಬೈದರೂ ಮಂತ್ರಿಗಿರಿ ಪಡೆದ ರಾಮದಾಸ?

By Mahesh
|
Google Oneindia Kannada News

SA Ramdas
ಮೈಸೂರು, ಆ. 8 :ಅಹಾ..! ಇದಪ್ಪ ಯೋಗ ಅಂದ್ರೆ ಯಡಿಯೂರಪ್ಪ ಅವರನ್ನು ಬಹಿರಂಗವಾಗಿ ಬೈದರೂ ಸಚಿವ ರಾಮದಾಸ್ ಸದಾನಂದ ಗೌಡರ ಸಚಿವ ಸಂಪುಟದಲ್ಲಿ ಸ್ಥಾನ ಲಭಿಸುವುದು ಖಾತ್ರಿಯಾಗಿದೆ. ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಶಾಸಕರ ಪಟ್ಟಿಯಲ್ಲಿ ರಾಮದಾಸ್ ಹೆಸರು ಕಾಣಿಸಿಕೊಂಡಿರುವುದು ಇದಕ್ಕೆ ಸಾಕ್ಷಿ. ಆದರೆ, ಯಾವುದೇ ಅಧಿಕೃತ ಹೇಳಿಕೆ ಇನ್ನೂ ರಾಜ್ಯ ಬಿಜೆಪಿಯಿಂದ ಹೊರಬಿದ್ದಿಲ್ಲ.

ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನ ಪಡೆದು ವಿಜೃಂಭಿಸಿದ್ದ ಎಸ್.ಎ.ರಾಮದಾಸ್ ಗೆ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಲಿದೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಕಾರಣವೂ ಇತ್ತು.

ಯಡಿಯೂರಪ್ಪ ರಾಜೀನಾಮೆಗೆ ಹೈಕಮಾಂಡ್ ಒತ್ತಾಯ ಹೇರಿದ ವೇಳೆಯಲ್ಲಿ 'ಯಡಿಯೂರಪ್ಪ ಅವರು ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ' ಎಂದು ಮಾಧ್ಯಮಗಳ ಮುಂದೆ ನಾಲಗೆ ಹರಿಬಿಟ್ಟಿದ್ದರು.

ಇದರಿಂದ ಸಹಜವಾಗಿ ಯಡಿಯೂರಪ್ಪ ಅಭಿಮಾನಿಗಳು ಕೆಂಡಾಮಂಡಲವಾಗಿ ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡದಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದರು. ಆದರೆ, ಮೈಸೂರು ಭಾಗವನ್ನು ಸಮರ್ಥವಾಗಿ ಪ್ರತಿನಿಧಿಸಲು ಯಾರು ಇಲ್ಲ ಎಂಬ ಅಂಶವನ್ನು ಪರಿಗಣಿಸಿ ರಾಮದಾಸ್ ಗೆ ಮತ್ತೆ ಮಣೆ ಹಾಕಲಾಗಿದೆ. ರಾಮದಾಸ್ ಅವರನ್ನು ಬಿಟ್ಟರೆ ಸಿಎಚ್ ವಿಜಯಶಂಕರ್ ಅವರು ಅರಣ್ಯ ಸಚಿವರಾಗಿದ್ದರು.

ಅಪ್ಪಿ ತಪ್ಪಿ ಕೂಡಾ ಶಂಕರಲಿಂಗೇಗೌಡ ಅವರಿಗೆ ಸಚಿವ ಸ್ಥಾನ ನೀಡುವ ತಪ್ಪು ಕೆಲಸ ಮಾಡುವ ಮನಸ್ಸು ಬಿಜೆಪಿ ನಾಯಕರಿಗಿಲ್ಲ. ರಾಮದಾಸ್ ಸಚಿವರಾಗಲು ಜಗದೀಶ್ ಶೆಟ್ಟರ್ ಬಣ ಕೂಡಾ ವಿರೋಧಿಸುತ್ತಿಲ್ಲ ಹೀಗಾಗಿ ಯಡ್ಡಿಯನ್ನು ಬೈದರೂ ಸಚಿವ ಸ್ಥಾನ ಗಿಟ್ಟಿಸಿಕೊಂಡ ಸಾಧನೆಯನ್ನು ರಾಮದಾಸ್ ಮೆರೆದಿದ್ದಾರೆ.

English summary
Rumours and speculation about Medical Education Minister S.A.Ramdas likely to be dropped from new cabinet has proved to be wrong. Even after making allegation against Yeddyurappa also Mysore in charge minister Ramdas has been shortlisted in the Sadananda Gowda cabinet ministers list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X