ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಡಿಕೆ ಕಾಲದಲ್ಲಿ ಅತ್ಯಧಿಕ ಅದಿರು ಅಕ್ರಮ ರಫ್ತು

By Srinath
|
Google Oneindia Kannada News

HDK exported illegally 65 lakh metric ton ore,
ಬೆಂಗಳೂರು, ಆಗಸ್ಟ್ 08: ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 11 ಸಾವಿರ ಕೋಟಿ ರೂ. ನಷ್ಟವುಂಟಾಗಿದೆ. ಈ ಅವಧಿಯಲ್ಲಿ 65 ಲಕ್ಷ ಮೆಟ್ರಿಕ್‌ ಟನ್‌ ಅದಿರು ಅಕ್ರಮವಾಗಿ ವಿದೇಶಕ್ಕೆ ರಫ್ತಾಗಿರುವ ಮಾಹಿತಿ ಲೋಕಾಯುಕ್ತ ವರದಿಯಲ್ಲಿದೆ.

2006-07 ಮತ್ತು 2007ರ ಸೆಪ್ಟೆಂಬರ್ ವರೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಂಧ್ರಪ್ರದೇಶದ ಕಾಕಿನಾಡ, ವಿಶಾಖಪಟ್ಟಣ, ಗೋವಾ, ಚೆನ್ನೈ ಬಂದರುಗಳಿಂದ ಅಕ್ರಮವಾಗಿ ಅತಿ ಹೆಚ್ಚು ಕಬ್ಬಿಣದ ಅದಿರು ರಫ್ತಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಿಎಸ್‌ಕೆ ಟ್ರೇಡಿಂಗ್‌ ಕಂಪೆನಿ ಅದಿರು ರಫ್ತಿನಲ್ಲಿ ಪ್ರಮುಖ ಪಾತ್ರವಹಿಸಿದ್ದರೂ, ಇದು ಯಾವ ರೀತಿ ಲಾಭ ಮಾಡಿಕೊಂಡಿದೆ ಎಂಬುದರ ವಿವರ ಲೋಕಾಯುಕ್ತ ವರದಿಯಲ್ಲಿ ಇಲ್ಲ. ಒಟ್ಟಾರೆಯಾಗಿ ಎಚ್‌ಡಿ ಕುಮಾರಸ್ವಾಮಿ ಅವಧಿಯಲ್ಲೇ ಅತಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೆದಿರುವುದು ಲೋಕಾಯುಕ್ತರು ನೀಡಿರುವ ಅಂಕಿ ಅಂಶದಿಂದ ಖಚಿತಗೊಂಡಿದೆ.

ಆದರೆ ಎರಡು ಕಂಪನಿಗಳಿಗೆ ಪರವಾನಗಿ ಕೊಡಿಸಿ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟವುಂಟು ಮಾಡಿರುವ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಅದೇ ವಿಷಯವನ್ನು ಲೋಕಾಯುಕ್ತರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.

English summary
Who moved my Cheese? : As per the Lokayukta Justice Santosh Hegde report on Illegal Mining in Karnataka during Chief Minister HD Kumaraswamy administration 65 lakh metric tons of oron ore was exported illegally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X