ಆಭೂಷಣ್ 1 ಕೋಟಿ ಆಭರಣ ಪತ್ತೆ, ಕಳ್ಳ ನಾಪತ್ತೆ

ಸೋಹನ್ ಲಾಲ್ ಖತ್ರಿ ಎಂಬಾತ ಆ.5 ರಂದು ಚಿನ್ನ ಹಾಗೂ ವಜ್ರಾಭರಣಗಳನ್ನು ಕದ್ದು ತಲೆ ಮರೆಸಿಕೊಂಡಿದ್ದ. ಜುವೆಲ್ಲರಿ ಅಂಗಡಿ ಮಾಲಿಕರ ದೂರದ ಸಂಬಂಧಿಯಾಗಿದ್ದ ಈತ, ಸುಲಭವಾಗಿ ಕಳ್ಳತನ ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಲು ಯತ್ನಿಸಿದ್ದ.
ವಿಆರ್ ಆರ್ ಖಾಸಗಿ ಬಸ್ ಹತ್ತಿ ಮುಂಬೈ ಮುಖಾಂತರ ರಾಜಸ್ಥಾನ ಸೇರಲು ಯತ್ನಿಸುತ್ತಿದ್ದ ಸೋಹನ್ ನನ್ನು ಹೊಸಪೇಟೆ ಪೊಲೀಸರು ಗುರುತಿಸಿ ಚೇಸ್ ಮಾಡಿದ್ದಾರೆ.
ಆದರೆ, ತಕ್ಷಣವೇ ಕದ್ದ ಮಾಲನ್ನು ಬಸ್ ನಲ್ಲೇ ಬಿಟ್ಟು ಪರಾರಿಯಾದ ಸೋಹನ್, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಎಲ್ಲಾ ಅಭರಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಸೋಹನ್ ಬಂಧಿಸಲು ರಾಜಸ್ಥಾನಕ್ಕೆ ತೆರಳಿ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದಾರೆ.












Click it and Unblock the Notifications